ಹೊಸನಗರ ; ಇಲ್ಲಿನ ಕೋಟೆಗಾರ್ ಯುವಕ ಸಂಘ, ಕೋಟೆಗಾರ್ ವಿದ್ಯಾವರ್ಧಕ ಸಂಘ ಹಾಗೂ ಮಹಿಳಾ ಸಂಘದ ಆಶ್ರಯದಲ್ಲಿ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ರಾಮನವಮಿಯ ಪ್ರಯುಕ್ತ ರಾಮ ವಸಂತ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಕೋಟೆಗಾರ್ ಯುವಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್ ತಿಳಿಸಿದ್ದಾರೆ.
ಮಾ.27ರ ಶುಕ್ರವಾರ ಬೆಳಿಗ್ಗೆ 10ಗಂಟೆಗೆ ರಾಮವಸಂತ ಪೂಜೆ ನಂತರ ಸಾಮೂಹಿಕ ಸತ್ಯನಾರಾಯಣ ವ್ರತ ಮಧ್ಯಾಹ್ನ 1ಗಂಟೆಗೆ ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ 7ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ವೇದಿಕೆಯ ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್ ವಹಿಸಲಿದ್ದು ಮುಖ್ಯ ಅತಿಥಿಯಾಗಿ ಯುವಕ ಸಂಘದ ಗೌರವಾಧ್ಯಕ್ಷರಾದ ಅರುಣ್‌ಕುಮಾರ್, ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್‌ನಾಯ್ಕ್, ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಪಿ.ಆರ್. ಸಂಜೀವ, ಮಹಿಳಾ ಸಂಘದ ಅಧ್ಯಕ್ಷೆ ದೇವಿ ಹನುಮಂತರವರು ಆಗಮಿಸಲಿದ್ದಾರೆ.
ಸನ್ಮಾನ ;
ಹೊಸನಗರದ ನಾಟಿ ವೈದ್ಯೆ ಪ್ರೇಮ ನಾರಾಯಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್ ಹಾಗೂ ಜಯನಗರದ ಏರ್‌ಫೋರ್ಸ್ ಉದ್ಯೋಗಿಯಾದ ಅಂಕುಶ್ ಹೆಚ್.ಪಿ. ಯವರನ್ನು ಸನ್ಮಾನಿಸಲಾಗುವುದು. ಉರಗ ತಜ್ಞ ಗಣೇಶ್‌ರಿಗೆ ಸೇಪ್ಟಿಕಿಟ್ ವಿತರಿಸಲಾಗುವುದು. ವೇದಿಕೆ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಮಕ್ಕಳು ಮಹಿಳೆಯರಿಂದ ವಿವಿಧ ಕಾರ್ಯಕ್ರಮ ಹಾಗೂ ವಾರಿಯರ್ಸ್ ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದು ಪ್ರತಿಯೊಬ್ಬರು ಈ ಎಲ್ಲ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಹೇಳಿಕೊಂಡಿದ್ದಾರೆ.







