ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ, ಅದು ಹೃದಯ ಶ್ರೀಮಂತಿಕೆಯನ್ನು ಕೊಡುತ್ತದೆ

By malnad tech

Published on:

Spread the love

ಹೊಸನಗರ ; ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ. ಅದು ಹೃದಯ ಶ್ರೀಮಂತಿಕೆಯನ್ನು ಕೊಡುತ್ತದೆ. ಆರ್ಥಿಕ ದುರ್ಬಲರಾದವರ ಮಟ್ಟಕ್ಕೆ ಇಳಿದು ಅವರನ್ನು ಮೇಲೆತ್ತಿ ಸಬಲರನ್ನಾಗಿಸುವುದು ಹೃದಯಕ್ಕೆ ಒಂದು ಒಳ್ಳೆಯ ವ್ಯಾಯಾಮವಿದ್ದ ಹಾಗೆ. ಮನುಷ್ಯ ಮನೆ ಮನೆಯಲ್ಲೂ ಜನಿಸುತ್ತಾನೆ. ಆದರೆ ಮನುಷ್ಯತ್ವ ಎಂಬುದು ಎಲ್ಲರಲ್ಲಿಯೂ ಇರಬೇಕೆಂದೇನೂ ಇಲ್ಲ. ಆದರೆ ಹೃದಯ ಶ್ರೀಮಂತಿಕೆಯನ್ನು ಹೊಂದಿದ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಇದಕ್ಕೆಲ್ಲ ಜೀವಂತ ನಿದರ್ಶನರಾಗಿ ದುರ್ಬಲ ಕಲಾವಿದರ ಭವಿಷ್ಯದ ಆಶಾಕಿರಣವಾಗಿ ಗೋಚರಿಸುತ್ತಾರೆ.

ಹೊಸನಗರ ತಾಲ್ಲೂಕಿನ 50 ಶಾಲೆಯ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಯಕ್ಷಶಿಕ್ಷಣ ನೀಡುವ ಜೋತೆಗೆ ಅವರ ಪ್ರತಿಭೆಯನ್ನು ಹೊರಹಾಕು ವೇದಿಕೆ ನಿರ್ಮಾಣ ಅದರ ವೆಚ್ಚವನ್ನು ಸಹ ಪಟ್ಲ ಫೌಂಡೇಶನ್‌ ಭರಿಸುತ್ತಿರುವುದು ಹೊಸನಗರ ಜನತೆಯ ಭಾಗ್ಯ. ಪಟ್ಲ ಸತೀಶ್ ಶೆಟ್ಟರ ಕಾರ್ಯ ಶ್ಲಾಘನೀಯ ಎಂದು ಶಾಸಕ ಗೋಪಾಲಕೃಷ್ಣ ಹೇಳಿದರು.

ಶನಿವಾರ ಹೊಸನಗರ ಗಾಯತ್ರಿ ಮಂದಿರದಲ್ಲಿ ಪಟ್ಲ ಫೌಂಡೇಶನ್ ಅಶ್ರಯದಲ್ಲಿ ಅಂ ರಾಮಶೇಟ್ ವೇದಿಕೆ ಹಾಗು ಶ್ರೀ ಗಣಪತಿ ದೇವಾಸ್ಥಾನದ ಮಾರ್ಕೋಡು ಸುಬ್ರುಯ ಆಚಾರ್ಯ ವೇದಿಕೆಯಲ್ಲಿ 45 ಯಕ್ಷಗಾನ ಪ್ರಸಂಗ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಯಕ್ಷಗಾನ ಕಲೆಯನ್ನು ದೇವರಂತೆ ಪೂಜಿಸುವವರು, ಕಲೋಪಾಸಕರು, ಕಲಾಪೋಷಕರು, ದಾನಿಗಳು, ಕಲಾವಿದರೆಂದರೆ ಜೀವಬಿಡುವ ಅಭಿಮಾನಿಗಳು, ಸಹಾಯಹಸ್ತ ನೀಡುವ ಮಹನೀಯರು ನಮ್ಮ ನಡುವೆ ಹಲವಾರು ಮಂದಿ ಇರಬಹುದು. ಆದರೆ ಓರ್ವ ಕಲಾವಿದರಾಗಿ, ಅಶಕ್ತ ಕಲಾವಿದರನ್ನು ಆಧರಿಸುವ ಕೆಲಸ ಮಾಡಿದವರು ಅಪರೂಪ. ಅದೂ ಅಗಾಧ ಸಂಖ್ಯೆಯಲ್ಲಿ ಹಾಗೂ ದೊಡ್ಡ ದೊಡ್ಡ ಮೊತ್ತದಲ್ಲಿ ಹಲವು ಕೊಡುಗೆಗಳನ್ನು ನೀಡುವ ಮೂಲಕ ಎಂದರು.

ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆರ್ ಎಂ ಮಂಜುನಾಥ ಮಾತನಾಡಿ, ನಾವೀಗ ಯಕ್ಷಗಾನದ ಕಲಾ ಪ್ರಪಂಚದ ಏಳುಬೀಳುಗಳನ್ನು ದಾಟಿ ಒಂದು ಸುಸ್ಥಿರ ಕಲಾಪಯಣದ ಕಾಲಘಟ್ಟದಲ್ಲಿ ವಿಹರಿಸುತ್ತಿದ್ದೇವೆ. ಹಿಂದಿನ ಕಲಾವಿದರ ಬದುಕು, ಬವಣೆಗಳು ಈಗಿನ ಕಲಾವಿದರಿಗೆ ಇಲ್ಲ. ಆದರೆ ಈ ಉನ್ನತಿಗೆ ಅಡಿಪಾಯವನ್ನು ಹಾಕಿಕೊಟ್ಟ ಹಿರಿಯ ಕಲಾವಿದರು ಹರಿಸಿದ ಬೆವರಿನ ಬವಣೆ ಇನ್ನೂ ಮಾಸಿಹೋಗಿಲ್ಲ. ಅವರು ಹಾಕಿಕೊಟ್ಟ ಭದ್ರ ಅಡಿಪಾಯದ ಭವನದಲ್ಲಿ ನಾವು ವಾಸ ಮಾಡುತ್ತಿದ್ದೇವೆ. ಅಂತಹ ಹಿರಿಯ ಬಡ, ಅಶಕ್ತ ಕಲಾವಿದರು ಮೇಳಗಳಲ್ಲಿ ಈಗಲೂ ದುಡಿಯುತ್ತಿದ್ದಾರೆ. ಅಂತಹ ಬಡ, ಅಶಕ್ತ ಕಲಾವಿದರಿಗೆ ಆಸರೆಯಾಗಿ ನಿಂತವರೇ ಪಟ್ಲ ಸತೀಶ್ ಶೆಟ್ಟಿ, ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು’ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಹಲವಾರು ಕಲಾವಿದರಿಗೆ ಬದುಕಿನ ಬೆಳಕಿನತ್ತ ನಡೆಯುವ ದಾರಿಯನ್ನು ತೋರಿಸಿ ಕೊಟ್ಟಿದ್ದಾರೆ. ಅಂಧಕಾರದ, ಕಷ್ಟದ ಜೀವನದಲ್ಲಿ ತುಸುವಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದಿನ ಮಾತು. ಆಗ ಪಟ್ಲ ಸತೀಶ್ ಶೆಟ್ಟಿ ಎಂದೊಡನೆ ನನಗೆ ನೆನಪಾಗುತ್ತಿದ್ದುದು ಯಕ್ಷಗಾನದ ಭಾಗವತಿಕೆಯ ವಿಶಿಷ್ಟ ಶೈಲಿಯ ಗಾಯನ, ಸ್ವರ ಏರಿಳಿತಗಳಿಂದ ತನ್ನದೇ ಆದ ಹೇರಳ ಅಭಿಮಾನಿಗಳ ಪ್ರಭಾವಲಯವನ್ನು ಸೃಷ್ಟಿಸಿಕೊಂಡ ಭಾಗವತಿಕೆಯ ಝಲಕ್. ಬರಬರುತ್ತಾ ಯಕ್ಷಪ್ರಿಯರನ್ನು ಹುಚ್ಚೆಬ್ಬಿಸಿದ ‘ಪಟ್ಲ’ ಭಾಗವತಿಕೆಯು ತನ್ನ ಸ್ವರದ ಆಳ, ಅಗಲಗಳನ್ನು ಮತ್ತೂ ವಿಸ್ತಾರಗೊಳಿಸಿತು. ತನ್ನ ಎಳೆಯ ವಯಸ್ಸಿನಲ್ಲೇ ಭಾಗವತಿಕೆಯ ಹಿಡಿತ ಮತ್ತು ಲಯವನ್ನು ಕಂಡುಕೊಂಡ ಪಟ್ಲರು ತನ್ನ ಸ್ವರಮಾಧುರ್ಯದಿಂದ ಬಹುಬೇಗ ಪ್ರಸಿದ್ಧಿಗೆ ಬಂದ ಭಾಗವತರಾಗಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮಿಣ ಮಟ್ಟದ ಪ್ರತಿವೊಬ್ಬ ವಿದ್ಯಾರ್ಥಿಗಳು ಯಕ್ಷಗಾನವನ್ನು ತಿಳಿದುಕೊಂಡಿರ ಬೇಕು, ಕಲಾವಿದರಾಗದೇ ಹೋದರು ಚಿಂತೆಯಿಲ್ಲ ಕೊನೆ ಪಕ್ಷ ಉತ್ತಮ ಯಕ್ಷಗಾನ ಪ್ರಕ್ಷಕರಾದರೆ ಸಾಕು, ಪಟ್ಲ ಪೌಂಡೇಶನ ಕಳೆದ ಹತ್ತು ವರ್ಷಗಳಿಂದ ಯಕ್ಷಕಲಾದರು ಹಾಗೂ ಅವರ ಕುಟುಂಬ ರಕ್ಷಣೆಗೆ ಸಾಕಷ್ಟು ಯೋಜನೆಗಳನ್ನು ನೀಡುವುದ ಜೋಗೆ ರಾಷ್ಟ್ರ ಮಟ್ಟದಲ್ಲಿ ಯಕ್ಷಗಾನಕಲೆಯನ್ನು ಜಿವಂತವಾಗಿ ಉಳಿಸಿ ಬೆಳೆಸುವ ಕಾರ್ಯುದಲ್ಲಿ ತೊಡಗಿಕೊಂಡಿದ್ದೇವೆ. ಎಲ್ಲ ವಿದ್ಯಾರ್ಥಿಗಳಿ ಅಸಕ್ತಿಯಿಂದ, ಶ್ರದ್ದೆಯಿಂದ ಯಕ್ಷಗಾನ ಅಭ್ಯಾಸ ಮಾಡಿ ಎಂದು ಕರೆ ನೀಡಿದರು.

ಇದೆ ಸಂದರ್ಭದಲ್ಲಿ ಶಾಸಕರು ವತಿಯಿಂದ, ಆರ್ ಎಂ. ಮಂಜುನಾಥ ಗೌಡರ ವತಿಯಿಂದ, ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆ ವತಿಯಿಂದ ಇತರೆ ಶಾಲೆ ಸಂಘ-ಸಂಸ್ಥೆ ವತಿಯಿಂದ ವಿಶೇಷವಾಗಿ ಪಟ್ಲ ಸತೀಶ್ ಶೆಟ್ಟಿ ಅವರನ್ನು ಗೌರವಿಸಿ ಸನ್ನಾನಿಸಿದರು.

ಪಟ್ಲ ಫೌಂಡೇಶನ್ ಅಶ್ರಯಲ್ಲಿ ಹೊಸನಗರ,ಸಾಗರ, ತೀರ್ಥಹಳ್ಳಿ ವಿದಾನಸಭಾ ಕ್ಷೇತ್ರ ವ್ಯಾಪ್ತಿಯ 5500 ಮಕ್ಕಳಿಗೆ ಉಚಿತವಾಗಿ ಯಕ್ಷಶಿಕ್ಷಣವನ್ನ ಪ್ತಿ ಶಾಲೆಯಲ್ಲಿ ನೀಡಲಾಗುತ್ತಿದ್ದು, ಅವರ ಪ್ರತಿಭೆಯನ್ನು ಪ್ರದರ್ಶನ ಮಾಡುವ ಉದ್ದೇಶದಿಂದ ಇಂದು ಎರಡು ವೇದಿಕೆಯಲ್ಲಿ 30 ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದೆ, ಹಾಗೂ ಹೊಸನಗರ ಯಕ್ಷಗಾನ ಕಲಾವಿದರಿಗೆ 4 ಆಶ್ರಯ ಮನೆ ವಿತರಣೆ ಮಾಡಲಾಗಿದೆ, ಅರ್ಥಿಕವಾಗಿ ಹಿಂದೂಳಿದ 15 ಕಲಾವಿಧರಿಗೆ ತಲಾ 30 ಸಾವಿರದಂತೆ ಪ್ರೋತ್ಸಾಹ ಧನ ನೀಡಲಾಗಿದೆ. 500 ಮಕ್ಕಳೀಗೆ ಒಂದು ದಿನದ ಪ್ರವಾಸ ಕರೆದುಕೊಂಡು ಹೋಗಿದ್ದೇವೆ ಎಂದು ಪತ್ರಕರ್ತ ನಗರ ರಾಘವೇಂದ್ರ ಪ್ರಸ್ತಾವಿಕದಲ್ಲಿ ಮಾತನಾಡಿದರು.

ಅಂ .ರಾಮಶೇಟ್ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡು ವೇದಿಕೆಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಡಿ ದೇವರಾಜ್, ಬೆಂಗಳೂರಿನ ಉದ್ಯಮಿ ಮಾವಿನಕೊಪ್ಪ ಸುರೇಶ್ ಎನ್, ಹೊಸನಗರ ತಾಲ್ಲೂಕು ಅರೋಗ್ಯ ಭಾರತೀ ಅಧ್ಯಕ್ಷರಾದ ಡಾ.ಚೈತನ್ಯ (ಸುವರ್ಣಶ್ರೀ ಕ್ಲಿನಿಕ್) ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್, ಎನ್ ಆರ್ ದೇವನಾಂದ್ ಸಾಹಿತಿ ಸುಧೀಂದ್ರ ಭಂಡಾರ್ಕರ್, ಪತ್ರಕರ್ತ ಸಂಘದ ಅಧ್ಯಕ್ಷ ಎಂ.ಕೆ ವೆಂಕಟೇಶ್ ಮೂರ್ತಿ, ಗೌತಮ್ ಆಚಾರ್ಯ ಉಪಸ್ಥೀತರಿದ್ದರು.

ಸುಜಾತ ಸುರೇಶ್ ಸ್ವಾಗತಿಸಿ ,ವಿಶ್ವ ಹಿಂದೂ ಪರಿಷತ್ ಸಂಚಾಲಕ ಸುಧೀಂದ್ರ ಪಂಡಿತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದಿರು. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನಡೆಸಿದರು.

Leave a comment