ಈ ದಿನಗಳಂದು ವಿಳಂಬವಾಗಿ ಸಂಚರಿಸಲಿದೆ ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ !

Spread the love

Mysore-Shivamogga Town Express will run late on these days :ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೈಲ್ವೆ ನಿರ್ವಹಣಾ ಕಾರ್ಯಗಳ ಹಿನ್ನಲೆಯಲ್ಲಿ, ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16225) ಸಂಚಾರವನ್ನು ತಾತ್ಕಾಲಿಕವಾಗಿ ಮರುನಿಗದಿಗೊಳಿಸಲಾಗಿದೆ.

ಈ ಕುರಿತು ಮೈಸೂರಿನ ನೈರುತ್ಯ ರೈಲ್ವೆಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯೊಂದರಲ್ಲಿ ಮಾಹಿತಿ ನೀಡಿದ್ದು, ಮೈಸೂರು ವಿಭಾಗದ ಹೊಸ ಅಗ್ರಹಾರ ಮತ್ತು ಅಕ್ಕಿಹೆಬ್ಬಾಳು ಯಾರ್ಡ್ ಪ್ರದೇಶಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುವುದರಿಂದ, ಈ ಮಾರ್ಗದಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಜುಲೈ 1, 3 ಮತ್ತು 4, 2025 ರಂದು ಮೈಸೂರು ನಿಲ್ದಾಣದಿಂದ 30 ನಿಮಿಷ ವಿಳಂಬವಾಗಿ ಹೊರಡಲಿದೆ. ಜೊತೆಗೆ, ಮಾರ್ಗಮಧ್ಯೆ ಸುಮಾರು 70 ನಿಮಿಷಗಳವರೆಗೆ ಈ ರೈಲನ್ನು ನಿಯಂತ್ರಿಸಲಾಗುವುದು ಎಂದು ತಿಳಿಸಿದ್ದಾರೆ.

ರೈಲು ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಪ್ರಯಾಣದ ಯೋಜನೆ ರೂಪಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

Read More : RRB Technician ನೇಮಕಾತಿ 2025: ನಿಮ್ಮ ಕನಸಿನ ಸರ್ಕಾರಿ ಉದ್ಯೋಗಕ್ಕೆ ಅವಕಾಶ!

Leave a comment