ಬೆಂಗಳೂರು:ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ಮುಂದಿನ ದಿನಗಳಲ್ಲಿ ತಕ್ಕ ಬುದ್ದಿ ಕಲಿಸಲಿದ್ದಾಳೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ,” ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಸೋರಬ ಬೆಂಗಳೂರು ನಿವಾಸಿಗಳ ತಂಡದಿಂದ ಕೆಇಬಿ ಇಂಜಿನಿಯರ್ ಅಸೋಸಿಯೇಷನ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
“ನಾವು ಏನೇನು ಒಳ್ಳೆಯದನ್ನು ಮಾಡಿದರೂ, ಕೆಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ವಿಕೃತಪಡಿಸುತ್ತಾರೆ. ಸಿಗಂದೂರು ದೇವಿಯ ವಿಚಾರದಲ್ಲಿ ನಾನು ಮೊನ್ನೆ ಹೇಳಿದ್ದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೆ ನಾನು ದೇವಿಯ ಮೇಲೆ ಭಾರೀ ನಂಬಿಕೆ ಇಟ್ಟುಕೊಂಡಿದ್ದೇನೆ. ಅವಳು ಅವರಿಗೆ ತಕ್ಕ ಬುದ್ಧಿ ಕಲಿಸುತ್ತಾಳೆ ಎಂಬ ನಂಬಿಕೆಯಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಸೋರಬ ಜನತೆಗೆ ಕೃತಜ್ಞತೆ ಸಲ್ಲಿಸಿದ ಮಧು ಬಂಗಾರಪ್ಪ ಅವರು, “ನಾನು ಈ ಮಟ್ಟಕ್ಕೆ ಬೆಳೆದು ಬಂದಿರುವುದಕ್ಕೆ ಕಾರಣ ಜನರ ಆಶೀರ್ವಾದ. ನೀವು ‘ಬಂಗಾರಪ್ಪ’ ಎಂಬ ಕೋಟೆಯನ್ನು ನಿರ್ಮಿಸಿದ್ದೀರಿ. ಒಂದು ವೇಳೆ ಸೋತಾಗಲೂ ನಾವುಬೇಸರವಾಗಿದ್ದು, ಆದರೆ ಜನತೆ ಮತ್ತೆ ಗೆಲ್ಲಿಸಿದ್ದಾರೆ ನಮ್ಮ ಸೋಲಿಗಿಂತಲೂ ನೀವು ನೀಡಿದ ನಂಬಿಕೆ ಮುಖ್ಯವಾದದ್ದು,” ಎಂದು ಹೇಳಿದರು.
“ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ, ಅಭಿವೃದ್ಧಿಯ ವಿಚಾರದಲ್ಲಿ ಭೇದಭಾವವಿಲ್ಲದೆ ಕೆಲಸ ಮಾಡುವುದು ನಮ್ಮ ಕರ್ತವ್ಯ. ಯಾರೇ ಆಗಿರಲಿ, ಯಾವುದೇ ಸಮಸ್ಯೆ ನಮ್ಮ ಗಮನಕ್ಕೆ ತಂದರೆ, ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ,” ಎಂದು ಅವರು ಹೇಳಿದರು.
ಸೋರಬ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಮಹತ್ವದ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.