Egg for School students:ರಾಜ್ಯ ಸರ್ಕಾರ ಶಾಲಾ ಮಕ್ಕಳ ಆಹಾರ ಸುರಕ್ಷತೆ ಮತ್ತು ಪೌಷ್ಟಿಕತೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಕೆ ಕಡ್ಡಾಯವಾಗಿದೆ ಎಂಬ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿದೆ.
ಈ ಹೊಸ ಕ್ರಮದಂತೆ, 1ನೇ ತರಗತಿಯಿಂದ 10ನೇ ತರಗತಿ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿವಾರ ಆರು ದಿನ ಮೊಟ್ಟೆ ನೀಡಲೇಬೇಕೆಂಬ ನಿಯಮ ಜಾರಿಯಲ್ಲಿದೆ.
ಹಿಂದಿನಿಂದಲೇ ‘ಮಿಡ್‌ಡೇ ಮಿಲ್’ ಯೋಜನೆಯಡಿಯಲ್ಲಿ ಮಕ್ಕಳಿಗೆ ಪ್ರೋಟೀನ್ ಪೂರೈಸುವ ಉದ್ದೇಶದಿಂದ ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಕೆಲವು ಶಾಲೆಗಳಲ್ಲಿ SDMC (School Development and Monitoring Committee) ಸೂಚನೆಯಂತೆ ವಾರದಲ್ಲಿ ಕೆಲವು ದಿನ ಮೊಟ್ಟೆ ಬದಲು ಬಾಳೆಹಣ್ಣು ವಿತರಿಸಲಾಗುತ್ತಿದೆ. ಉದಾಹರಣೆಗೆ, ಸೋಮವಾರ ಮತ್ತು ಶನಿವಾರ ಬಾಳೆಹಣ್ಣು ನೀಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.
762 ಸರ್ಕಾರಿ ಶಾಲೆಗಳಲ್ಲಿ ನಡೆದ ತಪಾಸಣೆಯ ವೇಳೆ, ಸುಮಾರು 568 ಶಾಲೆಗಳಲ್ಲಿ ಈ ನಿಯಮದ ಉಲ್ಲಂಘನೆಯು ಕಂಡುಬಂದಿದೆ. ಈ ಬಗ್ಗೆ ಅನೇಕ ಪಾಲಕರು ಮತ್ತು ಸ್ಥಳೀಯರು ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ DDPI ಅಧಿಕಾರಿಗಳಿಗೆ ನೇರ ಸೂಚನೆ ನೀಡಿದ್ದು, ಅವರು 568 ಶಾಲೆಗಳಿಗೆ ಭೇಟಿ ನೀಡಿ SDMC ಸದಸ್ಯರಿಗೆ ಮಾರ್ಗದರ್ಶನ ನೀಡಬೇಕು ಹಾಗೂ ಮೊಟ್ಟೆ ವಿತರಿಕೆ ಕಡ್ಡಾಯವಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಸರ್ಕಾರದ ದೃಷ್ಟಿಕೋನ: ಮಕ್ಕಳ ಪೌಷ್ಟಿಕ ಆಹಾರದ ಮೂಲಕ ಅವರ ಆರೋಗ್ಯವನ್ನು ಬೆಳೆಸುವುದು ಹಾಗೂ ಶಿಶುಗಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವುದು. ಪ್ರತಿ ದಿನ ಮೊಟ್ಟೆ ನೀಡುವ ಮೂಲಕ ಮಕ್ಕಳಿಗೆ ಅಗತ್ಯವಿರುವ ಪ್ರೋಟೀನ್ ಪೂರೈಕೆಯಾಗುವುದು ಸರ್ಕಾರದ ನಂಬಿಕೆಯಾಗಿದೆ.
ಶೇಂಗಾ ಬೆಳೆಗಾರರಿಗೆ ಆನ್‌ಲೈನ್ ತರಬೇತಿ : ರೋಗ-ಕೀಟ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ

ಕಾವ್ಯ ಜಿ.ಕೆ 5 ವರ್ಷಗಳಿಗಿಂತ ಹೆಚ್ಚು ಕಾಲದ ಅನುಭವ ಹೊಂದಿರುವ ನಿಪುಣ ಪತ್ರಕರ್ತೆ. ತಜ್ಞ ಲೇಖನಗಳು, ಕೃಷಿಯ ಅಭಿವೃದ್ಧಿಯ ಕುರಿತ ವರದಿ ಹಾಗೂ ಕ್ರೀಡಾ ಕ್ಷೇತ್ರದ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸ್ಪಷ್ಟವಾದ ನಿರೂಪಣಾ ಶೈಲಿ ಮತ್ತು ವಿಚಾರಪೂರ್ಣ ಬರವಣಿಗೆಯಿಂದ ಓದುಗರ ಮನಸೆಳೆಯುವ ಕೌಶಲ್ಯ ಕವ್ಯಾರ ವೈಶಿಷ್ಟ್ಯ. ಮಾಹಿತಿ ಸಂಪನ್ನವಾದ, ಪ್ರಾಮಾಣಿಕ ಮತ್ತು ಜನರನ್ನು ಸೆಳೆಯುವ ಬರವಣಿಗೆಗೆ ಬದ್ಧರಾಗಿದ್ದಾರೆ.