ಹುಲಿಕಲ್ ಘಾಟ್ ನಲ್ಲಿ ಧರೆಕುಸಿತ – ಸಂಚಾರ ಸಂಪೂರ್ಣ ಸ್ಥಗಿತ!

By koushikgk

Published on:

Spread the love

ಹೊಸನಗರ :ಶಿವಮೊಗ್ಗ ಜಿಲ್ಲೆ ಮತ್ತು ಕರಾವಳಿ ಸಂಪರ್ಕಕೊಂಡಿಯಾಗಿರುವ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ನಲ್ಲಿ ಧರೆ ಕುಸಿತ ಸಂಭವಿಸಿದ್ದು, ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮಾಹಿತಿ ಪ್ರಕಾರ, ಮಧ್ಯಾಹ್ನದ ವೇಳೆಗೆ ಸಂಭವಿಸಿದ ಭಾರಿ ಮಳೆ ಹಿನ್ನೆಲೆಯಲ್ಲಿ, ಬಾಳೆಬರೆ ಘಾಟ್‌ ರಸ್ತೆಯಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆಯ ಮೇಲೆ ಮಣ್ಣು, ಬಂಡೆ, ಮರಗಳು ಜಾರಿ ಬಿದ್ದಿದ್ದು, ವಾಹನಗಳು ದಾಟುವಂತಿಲ್ಲ.

➡️ ಒಂದು ಗಂಟೆಯಿಂದ ರಸ್ತೆ ಎರಡೂ ಕಡೆ ನೂರಾರು ವಾಹನಗಳು ಸಾಲಾಗಿ ನಿಂತಿವೆ. ಪ್ರಯಾಣಿಕರು ಆತಂಕದಲ್ಲಿದ್ದಾರೆ.

➡️ಪಿಡಬ್ಲ್ಯೂಡಿ (PWD) ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಸ್ತೆ ತೆರವು ಕಾರ್ಯದಲ್ಲಿ ತೊಡಗಿದ್ದಾರೆ.

➡️ ಪೊಲೀಸ್ ಇಲಾಖೆ ಸ್ಥಳದಲ್ಲಿ ನಿಯಂತ್ರಣಕ್ಕೆ ಸಜ್ಜಾಗಿದೆ – ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಮನವಿ.

ಶಿವಮೊಗ್ಗ-ಭದ್ರಾವತಿ ನಡುವೆ ರೈಲ್ವೆ ಹಳಿ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡ್ಡಿ

Leave a comment