HOSANAGARA | ಕೃಷಿ ಇಲಾಖೆಯಿಂದ ಉತ್ತಮ ಬಿತ್ತನೆ ಬೀಜ ಹಾಗೂ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ ; ಪೂರ್ಣಿಮಾ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಈ ವರ್ಷ ಜೂನ್ ತಿಂಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾದ ಮಳೆಯಾಗಿದ್ದು ಹೊಸನಗರ ತಾಲ್ಲೂಕಿನ ಕೃಷಿ ಇಲಾಖೆಯಿಂದ ಉತ್ತಮ ಬಿತ್ತನೆ ಬೀಜಗಳನ್ನು ಹಾಗೂ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ತಿಳಿಸಿದರು.

ತಾಲ್ಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಯಳಗಲ್ಲು ಗ್ರಾಮದ ಜಯಲಕ್ಷ್ಮಿ ರವರ ಜಮೀನಿನಲ್ಲಿ ಸೋಬಾನೆ ಪದ ಹಾಡಿ ನಾಟಿ ಮಾಡುತ್ತಿದ್ದ ರೈತ ಮಹಿಳೆಯರೊಂದಿಗೆ ಸೇರಿ ಜಮೀನಿನಲ್ಲಿ ನಾಟಿ ಮಾಡಿ ಮಾತನಾಡಿದರು.

ಹೊಸನಗರ ತಾಲ್ಲೂಕಿನಲ್ಲಿ ಜೂನ್ ತಿಂಗಳಿಂದ ಇಲ್ಲಿಯವರೆಗೆ ಸುಮಾರು 2500 ಮಿ.ಮೀ. ಮಳೆಯಾಗಿದ್ದು ಶೇ.20ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ರೈತರಿಗೆ ಬಿತ್ತನೆ ಮಾಡಿ ಬೆಳೆ ಬೆಳೆಯಲು ಅನುಕೂಲಕರವಾದ ವಾತಾವರಣವಿದ್ದು ಕೃಷಿ ಇಲಾಖೆಯಿಂದ ಉತ್ತಮ ಬಿತ್ತನೆ ಬೀಜಗಳನ್ನು ಹಾಗೂ ಯಂತ್ರೋಪಕರಣಗಳನ್ನು ವಿತರಿಸಲಾಗಿದ್ದು ಕೃಷಿ ಚಟುವಟಿಕೆ, ಉತ್ತಮವಾಗಿ ಆರಂಭವಾಗಿದೆ ರೈತರು ರೋಗ ನಿರೋಧಕ, ಹೆಚ್ಚು ಇಳುವರಿ ನೀಡುವ ತಳಿಗಳನ್ನು ಬಳಸಬೇಕು ಇದರಿಂದ ಇಳುವರಿ ಹೆಚ್ಚಿ, ಕೃಷಿಯಲ್ಲಿ ಕೃಷಿಗೆ ಮಾಡುವ ವೆಚ್ಚ ಕಡಿಮೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ರೈತರಿಗೆ ಸಲಹೆ ನೀಡಿದರು.

ಈ ನಾಟಿ ಮಾಡುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ, ಹೊಸನಗರ ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ, ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ, ಕೃಷಿ ಅಧಿಕಾರಿ ಮಾರುತಿ, ಪ್ರತಿಮಾ ಇತರೆ ಕೃಷಿ ಇಲಾಖೆಯ ಸಿಬ್ಬಂದಿಗಳು ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Comment

error: Content is protected !!