ಹೊಸನಗರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈವರೆಗೆ 5 ಕೋಟಿ ರೂ.ಗಳಷ್ಟು ನೆರವು ; ಪ್ರದೀಪ್

Written by Malnadtimes.in

Updated on:

WhatsApp Group Join Now
Telegram Group Join Now

HOSANAGARA | ತಾಲ್ಲೂಕು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಮಾರು 114 ಸುಜ್ಞಾನ ಶಿಷ್ಯ ವೇತನ ಮಂಜೂರಾತಿ ಪಡೆದಿದ್ದು ನಮ್ಮ ಸಂಸ್ಥೆ ನೀಡುತ್ತಿರುವ ಕಾರ್ಯಕ್ರಮಗಳು ಕುಟುಂಬಗಳಿಗೆ ಬೆಳಕು ನೀಡುವ ಕಾರ್ಯಕ್ರಮವಾಗಿದೆ. ಈವರೆಗೆ ಟ್ರಸ್ಟ್‌ನ ವಿವಿಧ ಯೋಜನೆಗಳಡಿ ತಾಲೂಕಿನಲ್ಲಿ ಅಂದಾಜು 5 ಕೋಟಿ ರೂ‌.ಗಳಷ್ಟು ನೆರವನ್ನು ನೀಡಲಾಗಿದೆ ಎಂದು ಯೋಜನಾಧಿಕಾರಿ ಆರ್ ಪ್ರದೀಪ್ ತಿಳಿಸಿದರು.

ಪಟ್ಟಣದ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಆವರಣದಲ್ಲಿ 114 ಜನರಿಗೆ ಸುಜ್ಞಾನ ಶಿಷ್ಯವೇತನ ಮಂಜೂರಾತಿ ಪತ್ರ ಹಾಗೂ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಪೂಜ್ಯರ ಆಶೀರ್ವಾದ ಪೂರ್ವಕ ಪತ್ರ ವಿತರಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಹೊಸನಗರ ತಾಲ್ಲೂಕಿನಲ್ಲಿ ಈ ವರ್ಷ ಎರಡು ಕರೆಗಳಿಗೆ 9.36 ಲಕ್ಷ ವೆಚ್ಚ ಮಾಡಲಾಗಿದ್ದು ಒಟ್ಟು 17 ವರ್ಷಗಳಲ್ಲಿ 6 ಕೆರೆಗಳ ದುರಸ್ತಿ ಕಾರ್ಯ ಮಾಡಗಿದ್ದು ಒಟ್ಟು 43,64 ಲಕ್ಷ ಖರ್ಚು ಮಾಡಿದೆ. ಜನಮಂಗಲ ಕಾರ್ಯಕ್ರಮದಲ್ಲಿ ಈ ವರ್ಷ 5 ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸುಜ್ಞಾನ ನಿಧಿಯಲ್ಲಿ ಈ ವರ್ಷ 104 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು 13.7 ಲಕ್ಷ ರೂ. ಹಾಗೂ ಒಟ್ಟರೇ 506 ವಿದ್ಯಾರ್ಥಿಗಳಿಗೆ 62.74 ಲಕ್ಷ ಹಣ ಸಂದಾಯವಾಗಿದೆ. ಜ್ಞಾನ ದೀಪ ಶಿಕ್ಷಕರನ್ನು ಈಗಾಗಲೇ 7 ಜನರನ್ನು ಆಯ್ಕೆ ಮಾಡಲಾಗಿದ್ದು ಪ್ರತಿ ವರ್ಷ 56 ಸಾವಿರದಂತೆ ಹಣವನ್ನು ನೀಡುತ್ತಿದ್ದು ಇಲ್ಲಿಯವರೆಗೆ 21 ಜನ ಜ್ಞಾನದೀಪ ಶಿಕ್ಷಕರಿಗೆ 15 ಲಕ್ಷ ಹಣವನ್ನು ನೀಡಲಾಗಿದೆ.

ಹೊಸನಗರ ತಾಲ್ಲೂಕಿನಲ್ಲಿ 17ವರ್ಷಗಳಲ್ಲಿ ಲಕ್ಷಗಟ್ಟಲೇ ಜನಪರ ಕೆಲಸಗಳಿಗೆ ವಿನಿಯೋಗಿಸಲಾಗಿದ್ದು ದೇವಸ್ಥಾನಕ್ಕೆ ಮತ್ತು ಸಮುದಾಯ ಅಭಿವೃದ್ಧಿಗಾಗಿ ವಾರ್ಷಿಕ 4.75 ಲಕ್ಷ ಹಾಗೂ 17 ವರ್ಷಗಳಲ್ಲಿ 1,17,48,260 ರೂ. ಹಣ ವಿತರಿಸಲಾಗಿದೆ. ದೇವಸ್ಥಾನ ಜೀಣೋದ್ದಾರಕ್ಕಾಗಿ ಇಲ್ಲಿಯವರೆಗೆ 99.20 ಲಕ್ಷ ರೂ. ವಿತರಿಸಲಾಗಿದೆ. ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ 10.50 ಲಕ್ಷ ರೂ. ಹಣವನ್ನು ವಿತರಿಸಲಾಗಿದೆ. ಹಿಂದು ರುದ್ರಭೂಮಿಗೆ 7,78,260 ಹಣವನ್ನು ಈಗಾಗಲೆ ನೀಡಲಾಗಿದೆ. ಗೋಶಾಲೆ ಅಭಿವೃದ್ಧಿಗೆ 50 ಸಾವಿರ ಮದ್ಯವರ್ಜನ ಶಿಬಿರವನ್ನು ಏರ್ಪಡಿಸಲಾಗಿದ್ದು 2850 ಜನರು ಭಾಗವಹಿಸಿದ್ದು ಇದರ ಜೊತೆಗೆ ಶಿಬಿರ ಪಾನಮುಕ್ತ ನವ ಜೀವನ ಸಮಿತಿ ಸಂಖ್ಯೆ 20 ಶಿಬಿರಗಳಿವೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು 29 ಕಾರ್ಯಕ್ರಮ ಏರ್ಪಡಿಸಲಾಗಿದೆ‌.

ನಾವು ಉಚಿತವಾಗಿ 11.259 ಇಶ್ರಮ್ ಕಾರ್ಡ್ 3129 ಇತರೆ ಕಾರ್ಡ್, 8,0262 ಇತರೆ ಸೇವೆಗಳನ್ನು ಉಚಿತವಾಗಿ ಮಾಡಿ ಕೊಟ್ಟಿದ್ದೇವೆ. ಮಸಾಶನ ಕಾರ್ಯಕ್ರಮಗಲಲ್ಲಿ 96000 ಮತ್ಸಲ್ಯ ಕಿಟ್ ಒಟ್ಟು 56.87 ಲಕ್ಷ ಖರ್ಚು ಮಾಡಲಾಗಿದೆ ಎಂದು ಹೊಸನಗರ ತಾಲ್ಲೂಕಿನ ಯೋಜನಾಧಿಕಾರಿಯವರು ತಿಳಿಸಿದ್ದು, ಒಟ್ಟು ಈ ತಾಲ್ಲೂಕಿನಲ್ಲಿ 2464 ಪ್ರಗತಿ ಗುಂಪುಗಳಿದ್ದು ಸ್ವ ಸಹಾಯ 707 ವಾತ್ಸಲ್ಯ ಗುಂಪು 23 ಒಟ್ಟು ಕ್ರಿಯ ಶೀಲ ಗುಂಪುಗಳು 3194 ಒಟ್ಟು 20867 ಉಳಿತಾಯ 81 ಲಕ್ಷದಷ್ಟು ಉಳಿತಾಯವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೆಶಕರಾದ ಮುರುಳಿಧರ್‌ ಉದ್ಘಾಟಿಸಿ, ನಮ್ಮ ಸಂಸ್ಥೆಯ ಸದಸ್ಯರಿಗೆ ಎಲ್ಲ ರೀತಿಯ ಸಹಾಯ ಹಸ್ತ ನೀಡುವುದರ ಜೊತೆಗೆ ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ಜಿಲ್ಲಾ ಜನಜಾಗೃತಿಯ ವೇದಿಕೆಯ ಸದಸ್ಯರಾದ ಎನ್.ಆರ್ ದೇವಾನಂದ್‌ ಮಾತನಾಡಿ, ಶ್ರೀಧರ್ಮಸ್ಥಳ ಯೋಜನಾ ಕಾರ್ಯ ಇಡೀ ಕರ್ನಾಟಕದಲ್ಲಿಯೇ ಹೆಸರುಗಳಿಸಿದ್ದು ಇದನ್ನು ಸಹಿಸದ ಮತಾಂಧರು ಈ ಸಂಸ್ಥೆಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂಸ್ಥೆಯಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಲಭಿಸಿದೆ ಇದರ ಜೊತೆಗೆ ಈ ಹಿಂದೆ 10% ಬಡ್ಡಿ ತೆಗೆಕೊಳ್ಳುವವರ ಸಂಖ್ಯೆ ಕಡಿಮೆಯಾಗಿದ್ದು ನಾವು ಬದುಕಿರುವವರೆಗೆ ಭೂಮಿ, ತಾಯಿ-ತಂದೆ ಹಾಗೂ ಸಹಾಯ ಹಸ್ತ ನೀಡಿದವರ ಬಗ್ಗೆ, ಅನ್ನ ನೀಡಿದ ಸಂಸ್ಥೆಯ ಋಣವನ್ನು ಕಾಪಾಡಿಕೊಳ್ಳಿ ಎಂದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ವಕೀಲರಾದ ಮೋಹನ್ ಜಿ.ಶೆಟ್ಟಿ, ಮೇಲ್ವಿಚಾರಕರಾದ ಸುಭಾಷ್, ತಿಮ್ಮಪ್ಪ, ನಾಗೇಶ್, ಉಮಾ, ರೇಖಾ, ಕಛೇರಿ ಸಿಬ್ಬಂದಿಗಳಾದ ಪ್ರಶಾಂತ್, ಗುರು ರಶ್ಮಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!