ಮನೆಯಲ್ಲೇ ವಿಷ ಕುಡಿದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ !

Written by Malnadtimes.in

Updated on:

WhatsApp Group Join Now
Telegram Group Join Now

SHIVAMOGGA | ಮನೆಯಲ್ಲೇ ವಿಷ ಕುಡಿದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೆಯ ಶಿವಮೊಗ್ಗದ ಕ್ಲಾರ್ಕ್‌ ಪೇಟೆಯಲ್ಲಿ ನಡೆದಿದೆ.

ಮೃತರನ್ನು ಭುವನೇಶ್ವರಿ (41), ಸಹೋದರ ಮಾರುತಿ (37) ಹಾಗೂ ಇವರ ಮಗ ದರ್ಶನ್‌ (21) ಎಂದು ತಿಳಿದು ಬಂದಿದೆ. ಇವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ.

ಭುವನೇಶ್ವರಿ ಹಾಗೂ ಅವರ ತಮ್ಮ ಮತ್ತು ಮಗ ಸಾವನ್ನಪ್ಪಿದವರು. ಇವರು ವಿಷ ಸೇವಿಸಿ ಕಳೆದ ಭಾನುವಾರವೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಬಂಧಿಕರೊಬ್ಬರು ಮನೆಯ ಬಳಿಗೆ ಬಂದು ವಿಚಾರಿಸಿದಾಗ ಮೂವರು ಸಾವನ್ನಪ್ಪಿರುವ ವಿಷಯ ಗೊತ್ತಾಗಿದೆ. ತಕ್ಷಣವೇ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ಅವರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್‌ ಠಾಣೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ

Leave a Comment

error: Content is protected !!