ಶಿವಮೊಗ್ಗ : ಗ್ರಾಮ ಲೆಕ್ಕಿಗನೊಬ್ಬ (Village Accountant) ಲಂಚ (Bribe) ಪಡೆಯುವಾಗ ಲೋಕಾಯುಕ್ತ (Lokayuktha) ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ಗಾಡಿಕೊಪ್ಪ ವೃತ್ತ ಕಸಬಾ 1 ಕಚೇರಿಯ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ತನ್ನ ಕಚೇರಿಯಲ್ಲೇ 6 ಸಾವಿರ ರೂ. ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.
ಸಂಕೇತ್ ಎಂಬುವವರ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ಸುರೇಶ್ ಜಮೀನು ನೋಂದಣಿಗಾಗಿ ಹಣದ ಬೇಡಿಕೆ ಇಟ್ಟಿದ್ದು, ಹಣದ ಬೇಡಿಕೆಗೆ ಬೇಸತ್ತು ಸಂಕೇತ್ ಲೋಕಾಯುಕ್ತ ಮೊರೆ ಹೋಗಿದ್ದರು. ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷ ಉಮೇಶ್ ಈಶ್ವರ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.