ಹಾರ‍ನಹಳ್ಳಿ ; ವಿಜೃಂಭಣೆಯಿಂದ ಜರುಗಿದ ಬನಶಂಕರಿ ದೇವಿಯ ರಥೋತ್ಸವ

By malnad tech

Published on:

Spread the love

ರಿಪ್ಪನ್‌ಪೇಟೆ ; ಹಾರನಹಳ್ಳಿ ಸಂಕದೇವನಕೊಪ್ಪ ಇತಿಹಾಸ ಪ್ರಸಿದ್ದ ಬನಶಂಕರಿ ದೇವಿಯ ಬನದಹುಣ್ಣಿಮೆ ರಥೋತ್ಸವವು ವಿಜೃಂಭಣೆಯೊಂದಿಗೆ ಜರುಗಿತು.

ಸಂಕದೇವನಕೊಪ್ಪದ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಬಗೆಬಗೆಯ ಹೂವು, ತಳಿರು ತೋರಣ, ಹಣ್ಣುಗಳಿಂದ ಶೃಂಗಾರ ಮಾಡಲಾಗಿತು. ಶನಿವಾರ ಮುಂಜಾನೆಯಿಂದಲೇ ದೇವಿಗೆ ಪಂಚಾಮೃತ ಅಭಿಷೇಕ, ಕಳಸ ಪ್ರತಿಷ್ಟಾಪನೆ ಹೋಮ-ಹವನ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗದಂತಹ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾಭಕ್ತಿಯಿಂದ ಜರುಗಿದವು. ನಂತರ ಭಕ್ತ ಸಮೂಹಕ್ಕೆ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಹಾರ‍ನಹಳ್ಳಿ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡು ಬನಶಂಕರಿ ದೇವಿಯ ದರ್ಶನಾಶೀರ್ವಾದ ಪಡೆದರು.

Leave a comment