ಸೆ. 17ಕ್ಕೆ ಹೊಸನಗರದಲ್ಲಿ ದಸರಾ ಕ್ರೀಡಾಕೂಟ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA ; ಇದೇ ಸೆ. 17ರ ಮಂಗಳವಾರ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ 2024-25ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ (Dasara Sports) ಕೂಟ ನಡೆಯಲಿದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ರಾವ್ ತಿಳಿಸಿದ್ದಾರೆ.

ಈ ಕ್ರೀಡಾಕೂಟವು ಅಥ್ಲೆಟಿಕ್ಸ್, ವಾಲಿಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಒಳಗೊಂಡಿದೆ.

ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಕ್ರೀಡೆಯಲ್ಲಿ ವಿಜೇತರಾದ ಆಯ್ಕೆ ತಂಡಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತವೆ.

ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್ ತರುವುದು ಕಡ್ಡಾಯ ಹಾಗೂ ಪ್ರತಿ ಸ್ಪರ್ಧೆಗೆ ಕನಿಷ್ಟ ನಾಲ್ಕು ತಂಡಗಳು ಇರಬೇಕು. ಇಲ್ಲವಾದಲ್ಲಿ ಆಯೋಜಕರು ತಂಡ ಆಯ್ಕೆ ಮಾಡಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು.

ಒಬ್ಬರಿಗೆ ಎರಡು ವೈಯಕ್ತಿಕ ಹಾಗು ಒಂದು ಗುಂಪು ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಇದೆ. ನಿಗದಿತ ದಿನಾಂಕದ ಬೆಳಗ್ಗೆ ಸಮಯ 10 ಗಂಟೆ ಒಳಗಾಗಿ ಕ್ರೀಡಾಪಟುಗಳು ಸ್ಥಳದಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

Leave a Comment

error: Content is protected !!