ರಿಪ್ಪನ್‌ಪೇಟೆಯಲ್ಲಿ ಜಯಘೋಷಗಳೊಂದಿಗೆ ಗಣಪನಿಗೆ ಅದ್ಧೂರಿ ಸ್ವಾಗತ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE ; ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದು ಶಿವಮಂದಿರ ಹತ್ತಿರದಿಂದ ಮೆರವಣಿಗೆ ಮೂಲಕ ಗಣಪತಿಯನ್ನು ತರುವುದರೊಂದಿಗೆ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಜರುಗಿತು.

ಮಳೆಯ ಸಿಂಚನದೊಂದಿಗೆ ಗಣಪತಿಯನ್ನು ಮೆರವಣಿಗೆಯ ಮೂಲಕ ಹೊರಟು ಶಿವಮೊಗ್ಗ ರಸ್ತೆಯಿಂದ ವಿನಾಯಕ ವೃತ್ತಕ್ಕೆ ಬರುತ್ತಿದ್ದಂತೆ ಸೇನಾ ಸಮಿತಿಯವರು ವಿನಾಯಕ ವೃತ್ತದಲ್ಲಿ ಹಿಂದೂ ಭಗವಧ್ವಜವನ್ನು ಹಿಂದೂ ರಾಷ್ಟ್ರ ಸೇನಾ ಸಮಿತಿಯ ಹಿರಿಯರಾದ ಟಿ.ಆರ್.ಕೃಷ್ಣಪ್ಪ ಮತ್ತು ರತೇಶ್ವರಪ್ಪ ಗೌಡ ಗವಟೂರು ಹಾರಿಸುವುದರೊಂದಿಗೆ ಗಣಪತಿಯನ್ನು ಸ್ವಾಗತಿಸಿಕೊಂಡು ತಿಲಕ್ ಮಂಟಪಕಕ್ಕೆ ವಾದ್ಯ, ಭಜನೆಯೊಂದಿಗೆ ಜಯಘೋಷಣೆಯನ್ನು ಮೊಳಗಿಸುತ್ತಾ ಪ್ರತಿಷ್ಠಾಪನಾ ಸ್ಥಳಕ್ಕೆ ತರಲಾಯಿತು.

ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ ಮತ್ತು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟಸೇನಾ ಸಮಿತಿಯ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ದೇವಸ್ಥಾನ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ, ಎನ್.ಸತೀಶ್, ಜಯಲಕ್ಷ್ಮಿ, ಸುಧೀಂದ್ರ ಪೂಜಾರಿ, ತೀರ್ಥೇಶ್‌ ಅಡಿಕಟ್ಟು, ಲಕ್ಷ್ಮಣ ಬಳ್ಳಾರಿ, ಶೈಲಾ ಆರ್.ಪ್ರಭು, ಶ್ರೀನಿವಾಸ್, ಆಟೋ ಲಕ್ಷ್ಮಣ, ಸುಧೀರ್ ಪಿ.ಕಗ್ಗಲಿ ಲಿಂಗಪ್ಪ, ಕೆ.ಗಣೇಶ್‌ಪ್ರಸಾದ್, ಮಾಲ್ಗೂಡಿ ಶೇಖರ್, ಹೆಚ್.ಎನ್.ಚೋಳರಾಜ್, ನಾಗರಾಜ ಪವಾರ್, ಈಶ್ವರ ಮಳಕೊಪ್ಪ, ಭೀಮರಾಜ್, ಹೆಚ್.ಎನ್.ಉಮೇಶ್, ಪ್ರಕಾಶ್‌ಶೆಟ್ಟಿ, ಎಸ್.ದಾನಪ್ಪ, ಯೋಗೀಶ್, ಶ್ರೀನಿವಾಸ್‌ಆಚಾರ್, ಹೆಚ್.ಎನ್.ಉಮೇಶ್, ಶ್ರೀಧರ, ಆರ್.ರಾಘವೇಂದ್ರ, ಮುರುಳಿಧರ ಕೆರೆಹಳ್ಳಿ, ರವೀಂದ್ರ ಕೆರೆಹಳ್ಳಿ, ವಾಸುಶೆಟ್ಟರು ಗವಟೂರು, ಕೆ.ಎ.ನಾರಾಯಣ ಬೇಕರಿ, ವೈ.ಜೆ.ಕೃಷ್ಣ, ಸಂತೋಷ, ಸುಹಾಸ್, ರಂಜನ್, ಚಿಪ್ಪಳ್ಳಿ ರಾಘವೇಂದ್ರ, ಡಿ.ಈ.ರವಿಭೂಷಣ, ಸಂದೀಪಶೆಟ್ಟಿ, ಮಂಜುನಾಥ ಆಚಾರ್, ಪ್ರಶಾಂತ್, ಮಂಜುನಾಥ, ಭಾಸ್ಕರ್‌ಶೆಟ್ಟಿ, ಚಂದ್ರ ಡ್ರೈವರ್ ಮಲ್ಲಾಪುರ ಇನ್ನಿತರರು, ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.


ಸ್ವರ್ಣ ಗೌರಿ ಗಣಪತಿ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಗಣಹೋಮ

ಗೌರಿ ಗಣಪತಿ ಹಬ್ಬದ ಅಂಗವಾಗಿ ಇಲ್ಲಿನ ವರಸಿದ್ದಿವಿನಾಯಕ ಮತ್ತು ಜಗನ್ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲಾಗಿರುವ ಸ್ವರ್ಣಗೌರಿ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಗಣಹೋಮ ಮತ್ತು ದೇವಿಗೆ ವಿಶೇಷ ಪೂಜೆ ಜರುಗಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ವಿ.ಚಂದ್ರಶೇಖರ್ ಭಟ್ ಮತ್ತು ಗುರುರಾಜಭಟ್ ಇವರ ನೇತೃತ್ವದಲ್ಲಿ ಗಣಹೋಮ ಮತ್ತು ವಿಶೇಷ ಅಲಂಕಾರ ಪೂಜಾ ಕಾರ್ಯ ನೆರವೇರಿತು.

ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ ಭೀಮರಾಜ್, ಜಯಲಕ್ಷ್ಮಿ ಮೋಹನ್, ಕೋಮಲ ಕೇಶವ, ನಾಗರತ್ನ ದೇವರಾಜ್, ಸರಸ್ವತಿ ರಾಘವೇಂದ್ರ, ವನಮಾಲ, ವೇದಾಕ್ಷಿ ಜಗದೀಶ್, ಮಂಜುಳಾ ಕೇತಾರ್ಜಿರಾವ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ ಮತ್ತು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್ ಇನ್ನಿತರರು ಇದ್ದರು.

Leave a Comment

error: Content is protected !!