HOSANAGARA | ಗ್ಯಾರಂಟಿ ಅನುಷ್ಠಾನ ಸಮಿತಿ ನೂತನ ಕಚೇರಿ ಉದ್ಘಾಟಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA ; ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಮತದಾರರಿಗೆ ನೀಡಿದ ಐದು ಗ್ಯಾರಂಟಿ ಭರವಸೆಗಳು ಅನುಷ್ಠಾನಗೊಂಡ ಒಂದು ವರ್ಷ ಸಂದ ಹಿನ್ನಲೆಯಲ್ಲಿ ಅವುಗಳ ಪ್ರಾಮಾಣಿಕ ಅನುಷ್ಠಾನಕ್ಕಾಗಿ ರಾಜ್ಯ ವ್ಯಾಪ್ತಿ ತಾಲೂಕು ಕೇಂದ್ರಗಳಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯ ನಿರ್ವಹಣೆಗಾಗಿ ನೂತನ ಕಚೇರಿ ಆರಂಭಿಸುವಂತೆ ಸರ್ಕಾರ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಇಲ್ಲಿನ ತಾಲೂಕು ಪಂಚಾಯತಿ ಆವರಣದಲ್ಲಿ ಆರಂಭಗೊಂಡ ನೂತನ ಕಚೇರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ವರವಾಗಿ ಪರಿಣಮಿಸಿವೆ. ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಇತರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡ-ಮಧ್ಯಮ ವರ್ಗದ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದೆ. ಯೋಜನೆಯಿಂದ ವಂಚಿತ ಕುಟುಂಬಗಳು ಗ್ಯಾರಂಟಿ ವ್ಯಾಪ್ತಿಗೆ ಒಳಪಡಿಸಲು ನೂತನ ಸಮಿತಿ ಕಾರ್ಯೋನ್ಮುಖ ಆಗಲಿದೆ ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಬಿ. ಚಿದಂಬರ, ಸದಸ್ಯರಾದ ಉಬೇದುಲ್ಲಾ ಕೆಂಚನಾಲ, ರವೀಂದ್ರ ಕೆರೆಹಳ್ಳಿ, ರಮೇಶ್ ಫ್ಯಾನ್ಸಿ, ಸಿಂಥಿಯಾ ಶೆರಾವೋ, ಅಕ್ಷತಾ ನಾಗರಾಜ್, ಮಹೇಂದ್ರ ಬುಕ್ಕಿವರೆ, ನರಸಿಂಹ ಪೂಜಾರಿ, ಕೃಷ್ಣಮೂರ್ತಿ, ಅನಿಲ್ ಕುಮಾರ್, ಪೂರ್ಣಿಮಾ, ಸಂತೋಷ ಮಳವಳ್ಳಿ, ಕಾರಕ್ಕಿ ಲೋಹಿತ್, ಸುಮಂಗಲ ದೇವರಾಜ್, ಕರುಣಾಕರ, ತಹಶೀಲ್ದಾರ್ ರಶ್ಮಿ, ಇಒ ನರೇಂದ್ರ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ಶಾಸಕರ‌ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ, ಜಯನಗರ ಗೋಪಿ, ಬಹ್ಮೇಶ್ವರ ಸುದೀಪ್, ಮಾಧವ ಶೆಟ್ಟಿ ಮೊದಲಾವರು ಇದ್ದರು.

Leave a Comment

error: Content is protected !!