HOSANAGARA | ಮೇಲಿನಬೆಸಿಗೆ ಗ್ರಾಪಂ ವ್ಯಾಪ್ತಿಯ ವಸವೆ ಗ್ರಾಮದ ಕೃಷಿಕ ತಿಮ್ಮಪ್ಪಗೌಡ (79) ವಯೋಸಹಜ ಕಾಯಿಲೆಯಿಂದ ತಡರಾತ್ರಿ ಹೊಸನಗರದ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಇವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇಂದು ಮಧ್ಯಾಹ್ನ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.