ಹೊಸನಗರ ಸುಮೇಧಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ | ಷೇರುದಾರರಿಗೆ ಶೇ. 10 ಲಾಭಾಂಶ ಘೋಷಣೆ

Written by Malnadtimes.in

Updated on:

WhatsApp Group Join Now
Telegram Group Join Now

HOSANAGARA | 2023-24ನೇ ಸಾಲಿನ ವಾರ್ಷಿಕ ವಹಿವಾಟು ಅಂತ್ಯಕ್ಕೆ ಸಂಘ ರೂ. 28,39,716 ನಿವ್ವಳ ಲಾಭಗಳಿಸಿದ್ದು ತನ್ನ ಷೇರುದಾರರಿಗೆ ಶೇ.10 ಲಾಭಾಂಶ ನೀಡಿದೆ ಎಂದು ಸುಮೇಧಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ(ರಿ)ನ ಅಧ್ಯಕ್ಷ ಕೆ.ಆರ್. ಪ್ರದೀಪ್ ತಿಳಿಸಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಸಂಘದ 12ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2023-24ನೇ ಸಾಲಿನಲ್ಲಿ ಒಟ್ಟು 10 ಆಡಳಿತ ಮಂಡಳಿ ಸಭೆಗಳನ್ನು ನಡೆಸಲಾಗಿದ್ದು ಷೇರುದಾರರ ಸಹಕಾರದೊಂದಿಗೆ ಸೌಹಾರ್ದ ಭಾಂದವ್ಯ ಹೊಂದಿದ್ದು ಸಹಕಾರಿಯು 2023-24ನೇ ಸಾಲಿನಲ್ಲಿ 44,23,600 ರೂ.ಗಳ ಷೇರು ಬಂಡವಾಳದೊಂದಿಗೆ 16,47,59,811 ರೂ. ಗಳ ಠೇವಣಿಯೊಂದಿಗೆ ನಮ್ಮ ವಹಿವಾಟು ಆರಂಭಿಸಲಾಗಿದೆ ಎಂದರು.


ಸಹಕಾರಿಯ ಅಡಿಕೆ ದಲ್ಲಾಳಿ ಮಂಡಿಗೆ ಎಲ್ಲ ಸದಸ್ಯರ ಪ್ರೋತ್ಸಾಹದೊಂದಿಗೆ ಈ ವರ್ಷ ಒಟ್ಟು 16,581 ಚೀಲ ಅಡಿಕೆ ಅವಕವಾಗಿದ್ದು ಹೀಗೆಯೇ  ಮುಂದಿನ ದಿನಗಳಲ್ಲಿ ಇನ್ನೂ  ಹೆಚ್ಚಿನ ಸಲಹೆ ಸಹಕಾರಗಳನ್ನು ನೀಡುತ್ತಾ ಸಹಕಾರಿಯ ಏಳಿಗೆಗೆ ಎಲ್ಲಾ ಸದಸ್ಯರುಗಳು ಭಾಗಿಯಾಗಬೇಕೆಂದು ಹಾಗೂ ಈ ವರ್ಷ ಲಾಭಾಂಶದಲ್ಲಿ ಷೇರುದಾರರಿಗೆ 10% ಡಿವಿಡೆಂಟ್ ನೀಡಲು ನಿಶ್ಚಿಯಿಸಲಾಗಿದೆ, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಸದಸ್ಯರ ಸಹಕಾರದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭಾಂಶಗಳಿಸಲಿದೆ ತಮ್ಮ ಸಹಕಾರ ಅತ್ಯಗತ್ಯವಾಗಿದೆ ಎಂದು ಕೇಳಿಕೊಂಡರು.

ಸಹಕಾರಿ ಹೆಸರಿನಲ್ಲಿ ಈಗಾಗಲೇ ನೂತನ ಗೋದಾಮು ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ರೈತರು ಸಂಘದ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.

ಹಿರಿಯ ಲೆಕ್ಕಪರಿಶೋಧಕ ರವೀಂದ್ರನಾಥ್ ಮಾತನಾಡಿ, ಸಂಘವು ಪ್ರಗತಿಪಥದಲ್ಲಿದೆ. ಸದಸ್ಯರ ಸಲಹೆ ಸಹಕಾರ ಅತ್ಯಗತ್ಯವಾಗಿದೆ. ಸಹಕಾರಿ ಸಂಸ್ಥೆಗಳು ನಾಲ್ಕು ಕಾಲಿನ ಮಂಚವಿದ್ದಂತೆ. ಸಾಲಗಾರರು, ಠೇವಣಿದಾರರು, ಸದಸ್ಯರು, ಸಿಬ್ಬಂದಿಗಳು ಎಂಬ ನಾಲ್ಕು ವಿಭಾಗಗಳನ್ನು ಸರಿ ರೀತಿಯಲ್ಲಿ ಸಮತೋಲನದ ಮೂಲಕ ಸರಿದೂಗಿಸುವ ಹೊಣೆ ಆಡಳಿತ ಮಂಡಳಿ ಮೇಲಿದೆ. ಇತ್ತೀಚಿನ ದಿನಮಾನದಲ್ಲಿ ಜನರು ಸಾಮಾಜಿಕ ಜಾಲತಾಣ, ಜೆಂಕ್ ಫುಡ್, ಟಿವಿ, ಮೊಬೈಲ್, ಲ್ಯಾಪ್ ಟ್ಯಾಪ್ ಸೇರಿದಂತೆ ವಿವಿಧ ಪರದೆಗಳ ವ್ಯಸಯಿ ಆಗಿದ್ದು ಇದು ಸಾಮಾಜಿಕ, ಭೌತಿಕ ಹಾಗು ಆರ್ಥಿಕ ಉತ್ಪಾದಕತೆಗೆ ಮಾರಕವಾಗಿ ಪರಿಣಮಿಸಿದೆ. ಯುವಜನತೆ ಇದರಿಂದ ಕೂಡಲೇ ಮುಕ್ತರಾದಲ್ಲಿ ಮಾತ್ರವೇ ಸದೃಢ ದೇಶ ನಿರ್ಮಾಣ ಸಾಧ್ಯವೆಂದರು.

ಈ ವಾರ್ಷಿಕ ಸಭೆಯಲ್ಲಿ ಸಹಕಾರಿಯಲ್ಲಿ ಕನಿಷ್ಠ ವ್ಯವಹಾರ ಮಾಡಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಉಪಾಧ್ಯಕ್ಷ ವಿ.ಅನಂತ ಮೂರ್ತಿ ಮಾತನಾಡಿ, ಸಂಸ್ಥೆಯು ತಾಲೂಕು ಎಪಿಎಂಸಿ ವಹಿವಾಟಿನಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಇತ್ತೀಚಿನ ಕೃಷಿಗೆ ಸಂಬಂಧಿಸಿದ ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ರೈತಾಪಿ ವರ್ಗಕ್ಕೆ ಮಾರಕ ಎಂಬಂತೆ ಕಂಡುಬರುತ್ತದೆ, ಇದಕ್ಕೆ ಅಡಿಕೆ ಬೆಳೆಗಾರರು ಹೊರತಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು.

ಸಿಇಒ ಪ್ರಕಾಶ್ ತಿಳುವಳಿಕೆ ಪತ್ರ ಓದಿ ಮಹಾಸಭೆಯ ಅನುಮತಿ ಮೇರೆಗೆ ಹಾಜರಾತಿ ದಾಖಲಿಸಿ, ಲೆಕ್ಕ ಪರಿಶೋಧನಾ ವರದಿ ಮಂಡಿಸಿ ಸಭೆಯ ಒಪ್ಪಿಗೆ ಪಡೆಯಲಾಯಿತು.

ಹಿರಿಯ ಲೆಕ್ಕಪರಿಶೋಧಕ ರವೀಂದ್ರನಾಥ್ ಸಭೆ ಉದ್ಘಾಟಿಸಿದರು.

ನಿರ್ದೇಶಕರಾದ ಮೂಡಬಾಗಿಲು ರಮಾನಂದ, ವಿನಾಯಕ ಹೆದ್ಲಿ, ಎಸ್.ಪಿ. ಸುರೇಶ್, ಕಣಿವೆಬಾಗಿಲು ಸುಬ್ರಹ್ಮಣ್ಯ, ಕೋಡೂರು ಸುಬ್ರಹ್ಮಣ್ಯ ಭಟ್, ಅರವಿಂದ, ಅನಂತ ಪದ್ಮನಾಭ ಬಾಯಿರಿ, ಸುಜಾತ ಉಡುಪ, ಜ್ಯೋತಿ ಹರಿಕೃಷ್ಣ ಸಿಬ್ಬಂದಿಗಳಾದ ಮಧುಕರ್, ಸುಮಂತ್, ಮಹೇಶ್, ನಾಗಲಿಂಗೇಶ್, ಕು. ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ಶ್ರೀಲಕ್ಷ್ಮಿ ಪ್ರಾರ್ಥಿಸಿ,
ಶಾಖಾ ವ್ಯವಸ್ಥಾಪಕ ಸುನೀಲ್ ಹಳೆತೋಟ ಸ್ವಾಗತಿಸಿದರು, ನಿರ್ದೇಶಕ ಬಿ.ಪಿ.ಉಮೇಶ್ ವಂದಿಸಿದರು.

Leave a Comment

error: Content is protected !!