HOSANAGARA | ಶಂಕಿತ ರೇಬೀಸ್ಗೆ ಮಹಿಳೆ ಬಲಿಯಾದ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಶಿವಪ್ಪನಾಯಕ ರಸ್ತೆ ನಿವಾಸಿ ಗೇರುಪುರ ಮೂಲದ ದಿ. ಪ್ರಸನ್ನ ಎಂಬುವರ ಪತ್ನಿ ಸಂಗೀತಾ (38) ಮೃತ ದುರ್ಧೈವಿ. ಕಳೆದ ಜುಲೈ 14ರಂದು ಇವರಿಗೆ ನಾಯಿ ಕಚ್ಚಿತ್ತು. ಸಕಾಲದಲ್ಲಿ ಸೂಕ್ತ ಚುಚ್ಚುಮದ್ದು ಪಡೆಯದೇ ಇದ್ದುದ್ದರಿಂದ ರೇಬೀಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ನಂತರ ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ರೋಗ ಉಲ್ಬಣಗೊಂಡಿದ್ದರಿಂದ ಇವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶುಕ್ರವಾರ ಸಂಗೀತಾ ಸಾವಿಗೀಡಾಗಿದ್ದಾರೆ. ಮೃತಳಿಗೆ ಪುತ್ರ, ಪುತ್ರಿ ಇದ್ದಾರೆ.
ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.