ಆ. 21ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಪಟ್ಟಣದ ಹಳೆ ಸಾಗರ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಶ್ರೀ ಗುರುಗಳ 353ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 21ರ ಬುಧವಾರ ವೈಭವದಿಂದ ನಡೆಸಲು ತೀರ್ಮಾನಿಸಿರುವುದಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸಮಿತಿಯ ಎನ್ ವಿಜೇಂದ್ರ ಶೇಟ್ ತಿಳಿಸಿದ್ದಾರೆ.

ಅಂದು ಬೆಳಗ್ಗೆ 6 ಗಂಟೆಗೆ ಅಷ್ಟೋತ್ತರ, 7 ಗಂಟೆಗೆ ಪಂಚಾಮೃತ ಅಭಿಷೇಕ, 11 ಗಂಟೆಗೆ ಅಲಂಕಾರ ಸೇವೆ ಹಸ್ತೋಧಕ, ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ 01 ಗಂಟೆಗೆ ಸಾಮೂಹಿಕ ಅನ್ನಸಂತರ್ಪಣೆ, ರಾತ್ರಿ 7:30ಕ್ಕೆ ಪಲ್ಲಕ್ಕಿ ಉತ್ಸವ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ತಿಳಿಸಿದರು.

ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದ್ದಾರೆ.

ರಿಪ್ಪನ್‌ಪೇಟೆ :

RIPPONPETE | ಬೈರಾಪುರ, ಗರ್ತಿಕೆರೆ ಹಾಗೂ ಹರತಾಳು ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 20 ರಿಂದ 22 ರವರೆಗೆ ಶ್ರೀಗುರುಸಾರಭೌಮರ 353ನೇ ಆರಾಧನಾ ಮಹೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಆಗಸ್ಟ್ 20 ರಂದು ಮಂಗಳವಾರ ಪೂರ್ವಾರಾಧನೆ ವಿಶೇಷ ಪೂಜೆ ತೀರ್ಥಪ್ರಸಾದ ವಿನಿಯೋಗ. ಆಗಸ್ಟ್ 21 ರಂದು ಬುಧವಾರ 9 ಗಂಟೆಗೆ ಗುರುರಾಯರ ಆರಾಧನೆ ವಿಶೇಷ ಪೂಜೆ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 1.30 ಕ್ಕೆ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.

ಆಗಸ್ಟ್ 22 ರಂದು ಗುರುವಾರ ಗುರುರಾಯರ ಸನ್ನಿಧಿಯಲ್ಲಿ “ಉತ್ತರಾರಾಧನೆ’’ ಪೂಜೆ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು ಸಕಲ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಸಾರ್ವಭೌಮರ ದರ್ಶನಾಶೀರ್ವಾದ ಪಡೆಯುವಂತೆ ಮಠದ ಪ್ರಕಟಣೆ ತಿಳಿಸಿದೆ.

Leave a Comment

error: Content is protected !!