RIPPONPETE |  ಮಳೆಯಾರ್ಭಟಕ್ಕೆ ಮನೆಗಳ ಗೋಡೆ ಕುಸಿತ, ಹಲವೆಡೆ ಸಂಪರ್ಕ ಕಡಿತ, ಜಮೀನುಗಳು ಜಲಾವೃತ !

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಹಗಲು-ರಾತ್ರಿ ಎನ್ನದೇ ಎಡಬಿಡದೆ ಸುರಿದ ಭಾರಿ ಮಳೆಗೆ ಇಲ್ಲಿನ ಶಿವಮೊಗ್ಗ ರಸ್ತೆ ಶಿವಮಂದಿರ ಎದುರಿನ ರತ್ನಮ್ಮ ಎನ್ನುವವರ ಮನೆ ಗೋಡೆ ತಡರಾತ್ರಿ ಹತ್ತು ಗಂಟೆಯ ಸುಮಾರಿನಲ್ಲಿ ಮತ್ತು ಅರಸಾಳು ಗ್ರಾಮ ಪಂಚಾಯ್ತಿ ನೀರುಗಂಟಿ ಪೀಟರ್‌ಕೋತ್ ಎಂಬುವರ ಮನೆಯ ಗೋಡೆ ಬೆಳಗ್ಗಿನಜಾವದಲ್ಲಿ ಕುಸಿದು ಬಿದ್ದಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

ಬರುವೆ 3ನೇ ವಾರ್ಡ್‌ನಲ್ಲಿನ ರತ್ನಮ್ಮನವರು ಮಲಗಿದ್ದ ಕೋಣೆಯ ಒಂದು ಭಾಗದ ಗೋಡೆ ಭಾರಿ ಸದ್ದಿನೊಂದಿಗೆ ಕುಸಿದು ಹೊರಭಾಗಕ್ಕೆ ಬಿದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ತಕ್ಷಣವೇ ಸ್ಥಳೀಯರು ಆಗಮಿಸಿ ಮನೆಯವರ ನೆರವಿಗೆ ನಿಂತಿದ್ದಾರೆ. ಅಲ್ಲದೆ ಅರಸಾಳು ಗ್ರಾಮದ ನೀರುಗಂಟಿ ಪೀಟರ್‌ಕೋತ್ ಎಂಬುವರ ಮನೆಯ ಗೋಡೆ ಬೆಳಗಿನಜಾವ ಬಿದ್ದಿದ್ದು ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯ್ತಿಯವರು ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಪೀಟರ್ ಕೋತ್‌ಗೆ ಧೈರ್ಯ ತುಂಬಿ ಸರ್ಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಜನ್ನಂಗಿ ಹೊಳೆ ತುಂಬಿ ನಂಜುವಳ್ಳಿ-ಮುತ್ತಲ ಸಂಪರ್ಕ ಕಡಿತ, ಜಮೀನುಗಳು ಜಲಾವೃತ, ಹೊಸಳ್ಳಿಯಲ್ಲಿ ಮನೆ ಬಿದ್ದು ಬೀದಿಗೆ ಬಂದ ಕುಟುಂಬ !

RIPPONPETE | ಧಾರಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿಕ್ಕಜೇನಿ ಗ್ರಾಮ ಪಂಚಾಯ್ತಿ ಮುತ್ತಲ ಗ್ರಾಮದ ಜನ್ನಂಗಿ ಹೊಳೆ ತುಂಬಿ ಹರಿಯುತ್ತಿದ್ದು ನಂಜುವಳ್ಳಿ-ಮುತ್ತಲ ಸಂಪರ್ಕ ಸೇತುವೆ ಮೇಲೆ ನೀರು ನುಗ್ಗಿ ಸಂಪರ್ಕ ಕಡಿತಗೊಂಡಿದ್ದು ಅಕ್ಕಪಕ್ಕದ ಜಮೀನಿನ ತೋಟಗಳು ಸಂಪೂರ್ಣ ಜಲಾವೃತಗೊಂಡು ಸಾಕಷ್ಟು ಹಾನಿ ಸಂಭವಿಸಿದೆ.

ಇನ್ನೂ ಹೊಸಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದ ಕೃಷ್ಣಪ್ಪ ಎಂಬುವರ ಮನೆ ಸಹ ಬಿದ್ದಿದ್ದ ರೈತಕೂಲಿ ಕಾರ್ಮಿಕ ಕುಟುಂಬ ಬೀದಿಗೆ ಬರುವಂತಾಗಿ ಯಾವುದೇ ಪ್ರಾಣಹಾನಿ ಸಂಭವಿಸದೆ ಎಲ್ಲರೂ ಪಾರಾಗಿದ್ದಾರೆ.

ಹಾನಿಗೊಳಗಾದ ಸ್ಥಳಕ್ಕೆ ತಹಶೀಲ್ದಾರ್ ರಶ್ಮಿ ಹಾಲೇಶ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿಗೌಡ, ಶಾಸಕ ಬೇಳೂರು ಗೋಪಾಲಕೃಷ್ಣ ಆಪ್ತನಾಯಕ ಸಣ್ಣಕ್ಕಿ ಮಂಜು, ಚಿಕ್ಕಜೇನಿ ಗ್ರಾಮ ಪಂಚಾಯ್ತಿ ಸದಸ್ಯ ಭದ್ರಪ್ಪಗೌಡ, ಕೃಷ್ಣಪ್ಪ, ಪಂಚಾಯಿತಿ ಪಿಡಿಓ, ಕಾರ್ಯದರ್ಶಿ ಭೇಟಿ ನೀಡಿ ವೀಕ್ಷಣೆ ಮಾಡುವ ಮೂಲಕ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Leave a Comment

error: Content is protected !!