ಮಲೆನಾಡಿನ ರೈತರಿಗೆ ವರದಾನವಾದ ಡ್ರಂ ಸೀಡರ್ ಬಿತ್ತನೆ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಮಲೆನಾಡಿನ ವ್ಯಾಪ್ತಿಯಲ್ಲಿ ಸರಳ ವಿಧಾನದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತಹ ಡ್ರಂ ಸೀಡರ್ ಬಿತ್ತನೆ ರೈತರಿಗೆ ವರದಾನವಾಗಿದೆ ಎಂದು ಹೊಸನಗರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್‌ಹೆಗಡೆ ಹೇಳಿದರು.

ಜಂಬಳ್ಳಿ ಗ್ರಾಮದ ಜೆ.ಆರ್.ಮೃತ್ಯುಂಜಯ ಎಂಬುವರ ಹೊಸನಗರ ಕೃಷಿ ಇಲಾಖೆ ಮತ್ತು ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ಆಯೋಜಿಸಲಾದ ರೈತ ಮೃತ್ಯುಂಜಯ ಜಮೀನಿನಲ್ಲಿ ಇಂದು ಡ್ರಂಸೀಡರ್ ಮೂಲಕ ನೇರ ಬಿತ್ತನೆ ಕುರಿತು ರೈತ ಕ್ಷೇತ್ರ ಪಾಠಶಾಲೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ, ರೈತರು ಈ ಸರಳ ಉಪಕರಣಗಳನ್ನು  ಕೃಷಿಯಲ್ಲಿ ಅಳವಡಿಸಿಕೊಂಡು ಕಡಿಮೆ ಕೂಲಿ ಆಳುಗಳ ಮೂಲಕ ಹೆಚ್ಚು ಇಳುವರಿಯೊಂದಿಗೆ ಆರ್ಥಿಕಾಭಿವೃದ್ದಿಯನ್ನು ಹೊಂದ ಬಹುದಾಗಿದೆ. ಈ ಸರಳ ವಿಧಾನವನ್ನು ಗಂಗಾವತಿ ರಾಯಚೂರ ಜಿಲ್ಲೆಯಲ್ಲಿ ಬೇಸಿಗೆ ಬೆಳೆಯಲ್ಲಿ ಬಳಸಿಕೊಳ್ಳುತ್ತಿದ್ದು ಈಗ ಮಲೆನಾಡಿನ ವ್ಯಾಪ್ತಿಯಲ್ಲಿ ಬಳಸುತ್ತಿದ್ದು  ಈ ವಿಧಾನ ರೈತರಿಗೆ ವರದಾನವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹೊಸನಗರ ಕೃಷಿ ಅಧಿಕಾರಿ ಎಂ.ಎಸ್.ಮಾರುತಿ, ಹುಂಚ ರೈತ ಸಂಪರ್ಕ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್, ರೈತರಾದ ಜೆ.ಆರ್. ಮೃತ್ಯುಂಜಯ, ಜೆ.ಎಂ. ಶಾಂತಕುಮಾರ್, ಜೆ.ಎಸ್.ಕಮಲಾಕ್ಷ, ಜೆ.ಜಿ.ಸದಾನಂದ, ಕಲ್ಲೂರು ಬಾಲಚಂದ್ರಗೌಡ, ನಾಗೇಂದ್ರ, ರವೀಂದ್ರ, ಶಶಿಕುಮಾರ್, ಚಂದ್ರುಕೋಟೆಗದ್ದೆ, ಹುಗುಡಿ ಮೃತ್ಯುಂಜಯ, ಶಿವಶಂಕರ ಬನಶೆಟ್ಟಿಕೊಪ್ಪ, ಪ್ರಶಾಂತ ಕೊಳವಳ್ಳಿ, ಜೆ.ಎಂ. ರಕ್ಷತಾ, ದೃವ ಹಾರೋಹಿತ್ತಲು, ವಿನಾಯಕ ಭಂಡಾರಿ, ಮೂರ್ತಿ, ಲೇಖಪ್ಪ ಇನ್ನಿತರರು, ಜಂಬಳ್ಳಿ ಗ್ರಾಮದ ರೈತ ಸಮೂಹ ಪಾಲ್ಗೊಂಡು ಸರಳ ಉಪಕರಣದ ಬಿತ್ತನೆ ಪ್ರಾತಿಕ್ಷತೆಯನ್ನು ವೀಕ್ಷಿಸಿದರು.

Leave a Comment

error: Content is protected !!