ಪ್ರಚಾರ ಕಾರ್ಯದಲ್ಲಿ ‘ಗೌರಿ’ ಚಿತ್ರ ತಂಡ

Written by Malnadtimes.in

Published on:

WhatsApp Group Join Now
Telegram Group Join Now

Shivamogga | ಲಾಪಿಂಗ್ ಬುದ್ದ ಸಂಸ್ಥೆಯಡಿ ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ (Indrajith Lankesh) ಅವರು ನಿರ್ಮಿಸಿ, ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ‘ಗೌರಿ’ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರತಂಡ ಈಗ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಅದರ ಭಾಗವಾಗಿಯೇ ಚಿತ್ರ ತಂಡ ಜೂ. 12 ರಂದು ಬುಧವಾರ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ, ಚಿತ್ರದ ಪ್ರಚಾರ ನಡೆಸಿತು.
ಶಿವಮೊಗ್ಗ ನಗರದ ಪ್ರತಿಷ್ಟಿತ ಸಹ್ಯಾದ್ರಿ ವಿಜ್ಞಾನ ಕಾಲೇಜು ಹಾಗೂ ಪಿಇಎಸ್ ಕಾಲೇಜುಗಳಿಗೆ ಭೇಟಿ ನೀಡಿ, ಅಲ್ಲಿ ಚಿತ್ರದ ಪ್ರಮೋಷನ್ ಕಾರ್ಯ ಕ್ರಮಗಳಲ್ಲಿ ಚಿತ್ರ ತಂಡವು ಭಾಗಿಯಾಯಿತು.

ಚಿತ್ರದ ಪರಿಚಯಾತ್ಮಕ ವಿಡಿಯೋ ಹಾಗೂ ಹಾಡು ಗಳ ಲಿರಿಕಲ್ ವಿಡಿಯೋ ಪ್ರದರ್ಶನದ ಮೂಲಕ ಚಿತ್ರ ತಂಡವು ‘ಗೌರಿ ‘ಚಿತ್ರದ ವಿಶೇಷತೆಗಳ ಕುರಿತು ಮಾಹಿತಿ ನೀಡಿತು. ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರು ತಮ್ಮ ಪುತ್ರ ಸಮರ್ಜಿತ್ ಅವರನ್ನು ‘ಗೌರಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಬಗ್ಗೆ ಹೇಳಿಕೊಂಡರು.

ಗೌರಿ ಚಿತ್ರ ದೊಡ್ಡ ತಾರಾಗಣದೊಂದಿಗೆ ಅದ್ದೂರಿಯಾಗಿ ಮೂಡಿ ಬಂದ ಚಿತ್ರ. ಸರಿ ಸುಮಾರು 70ಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿದ್ದಾರೆ ಎಂದರು.

Leave a Comment

error: Content is protected !!