Crime News | ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ್ದ ಐವರು ಖದೀಮರು ಅಂದರ್ !

Written by Malnadtimes.in

Published on:

WhatsApp Group Join Now
Telegram Group Join Now

ಶಿವಮೊಗ್ಗ : ಅಡಿಕೆ (Arecanut) ಬೆಳೆಗಾರರ ನಿದ್ದೆಗೆಡಿಸಿದ್ದ 8 ಪ್ರಕರಣಗಳನ್ನು ಪತ್ತೆ ಮಾಡಿ ಐವರು ಅಡಿಕೆ ಕಳ್ಳರನ್ನು ಬಂಧಿಸಿ 15.19 ಲಕ್ಷ ರೂ. ಗಳ ಮೌಲ್ಯದ ಮಾಲು ವಶಕ್ಕೆ ಪಡೆಯಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ (Shivamogga SP) ಮಿಥುನ್ ಕುಮಾರ್ ಜಿ.ಕೆ. ತಿಳಿಸಿದ್ದಾರೆ.

ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ತುಕ್‌ರಾಜ್‌ (24), ಹಣಮಂತ (24), ರಾಕೇಶ್‌ (20), ಅಭಿಷೇಕ್‌ (20), ಶಿವಕುಮಾರ್‌ (23) ಬಂಧಿತ ಆರೋಪಿಗಳು.

ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್‌ ಮತ್ತು ಸೊರಬ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ಅಡಿಕೆ ಕಳವು ಪ್ರಕರಣಗಳು ಹೆಚ್ಚು ದಾಖಲಾಗಿದ್ದವು. ಹೀಗಾಗಿ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್‌ ತಂಡ ರಚನೆ ಮಾಡಲಾಗಿತ್ತು. ತಂಡವು ಭಾನುವಾರ 5 ಆರೋಪಿಗಳನ್ನು ಬಂಧಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹೇಳಿದರು.

ಎಸ್ಪಿ ಜಿ.ಕೆ. ಮಿಥುನ್‌ ಕುಮಾರ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಅನಿಲ್‌ ಕುಮಾರ್‌ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ-2 ಕಾರಿಯಪ್ಪ ಎ.ಜಿ. ಮಾರ್ಗದರ್ಶನದಲ್ಲಿ ಸಾಗರ ಉಪವಿಭಾಗ ಪೊಲೀಸ್‌ ಅಧೀಕ್ಷಕ ಗೋಪಾಲಕೃಷ್ಣ ನಾಯ್ಕ ಅವರ ಮೇಲ್ವಿಚಾರಣೆಯಲ್ಲಿ, ಸಾಗರ ಗ್ರಾಮಾಂತರ ಪೊಲೀಸ್‌ ನಿರೀಕ್ಷಕ ಮಹಾಬಲೇಶ್ವರ ಎಸ್‌.ಎನ್‌., ಪಿಎಸ್‌ಐ ಎ.ಆರ್‌. ಮುಂದಿನಮನಿ, ಸಿಬ್ಬಂದಿ ಸನಾವುಲ್ಲಾ, ಷೇಖ್‌ ಫೈರೋಜ್‌ ಅಹ್ಮದ್, ರವಿಕುಮಾರ್‌, ಪ್ರವೀಣ್‌ಕುಮಾರ್‌, ಗುರುಬಸವರಾಜ, ಗಿರೀಶ್‌ ಬಾಬು, ಗುರುರಾಜ, ಇಂದ್ರೇಶ್‌, ವಿಜಯ್‌ಕುಮಾರ್‌ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಆರೋಪಿಗಳ ಪತ್ತೆಗೆ ರಚಿಸಲಾಗಿತ್ತು.

Leave a Comment

error: Content is protected !!