ನಕಾಶೆ ಕಂಡ ಗ್ರಾ.ಪಂ. ಡಿವೇಶನ್ ರಸ್ತೆಯಲ್ಲಿ ವಿದ್ಯುತ್ ಕಂಬ, ಬಡಾವಣೆ ನಿವಾಸಿಗಳ ಆಕ್ರೋಶ

Written by Malnadtimes.in

Published on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ: ಇಲ್ಲಿನ ಸಾಗರ ರಸ್ತೆಗೆ ಸಂಪರ್ಕಿಸುವ ಗ್ರಾಮ ಪಂಚಾಯ್ತಿ ಹಿಂಭಾಗದ ನಕಾಶೆ ಕಂಡ ರಸ್ತೆಯ ಮಧ್ಯದಲ್ಲಿ ವಿದ್ಯುತ್‌ ಕಂಬವನ್ನು ಅಳವಡಿಸಿರುವುದರ ಬಗ್ಗೆ ಸಾರ್ವಜನಿಕರು ಮೆಸ್ಕಾಂ ಇಲಾಖೆಯ ವಿರುದ್ದ ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ನಕಾಶೆ ಕಂಡ ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆಂದು ನ್ಯಾಯಾಲಯದಲ್ಲಿ ಈ ಹಿಂದೆ ರಸ್ತೆಯ ನಿವಾಸಿಗಳು ದೂರು ದಾಖಲಿಸಿದ್ದು ನ್ಯಾಯಾಲಯ ಸಾರ್ವಜನಿಕರ ಮನವಿಗೆ ಸ್ಪಂದಿಸಿ 8 ಅಡಿ ಅಗಲದ ಸಂಪರ್ಕ ರಸ್ತೆಗೆ ಓಡಾಡಲು ಮುಕ್ತ ಅವಕಾಶ ನೀಡಿ ಆದೇಶವನ್ನು ನೀಡಲಾಗಿದ್ದರೂ ಕೂಡಾ ನ್ಯಾಯಾಲಯದ ಅದೇಶವನ್ನು ಉಲ್ಲಂಘಿಸಿ ಮೆಸ್ಕಾಂ ಗುತ್ತಿಗೆದಾರು ಏಕಾಏಕಿ ರಸ್ತೆಯಲ್ಲಿ ಮೆಸ್ಕಾಂ ಕಂಬವನ್ನು ಅಳವಡಿಸಿರುತ್ತಾರೆ.

ಸಾಗರ–ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ 26ರಲ್ಲಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ಈ ಎರಡು ರಾಜ್ಯ ಹೆದ್ದಾರಿ ಸಂಪರ್ಕದ ರಸ್ತೆಯ ತಲಾ ಒಂದೊಂದು ಕಿ.ಮೀ. ದ್ವಿಪಥ ರಸ್ತೆಗೆ ಈ ಹಿಂದಿನ ಸರ್ಕಾರ 4.85 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಲಾಗಿ ಒಂದು ವರ್ಷಗಳಾಗುತ್ತಾ ಬಂದರೂ ಕೂಡಾ ಇನ್ನೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ವಿನಾಯಕ ವೃತ್ತದ ಬಳಿಯ ಪಾತ್ರೆ ಅಂಗಡಿಯ ಬಳಿ ಬಾಕ್ಸ್ ಚರಂಡಿಗೆ ಹೊಂದಿಕೊಂಡಂತೆ ಇರುವ ಅಂಗಡಿಯನ್ನು ತೆರವು ಮಾಡದೆ ನ್ಯಾಯಾಲಯದ ಇನ್ಜಂಕ್ಷನ್ ಆದೇಶವಿದೆ ಎಂದು ಹೇಳಿಕೊಂಡು ಕಾಮಗಾರಿಗೆ ಕಂಟಕರಾಗಿದ್ದು ಈಗ ಆವರ ಕಟ್ಟಡ ಬಳಿಯ ಈ ಡಿವೇಶನ್ ನಕಾಶೆ ಕಂಡ ರಸ್ತೆಯ ಮಧ್ಯದಲ್ಲಿ ಮೆಸ್ಕಾಂ ಇಲಾಖೆಯವರು ಅವೈಜ್ಞಾನಿಕ ವಾಗಿ ಕಂಬವನ್ನು ಆಳವಡಿಸಿರುವುದರಿಂದ ಸಾರ್ವಜನಿಕರು ಓಡಾಡಂತಾಗಿದೆ ಎಂದು ಈ ರಸ್ತೆಯ, ನಿವಾಸಿಗಳಾದ ಜಿ.ಕೆ.ಆನಂತಶಾಸ್ತ್ರಿ ಭದ್ರಪ್ಪಗೌಡ, ಗುರುಮೂರ್ತಿ, ಶಿವರಾಜ್ ಪ್ರಭು, ಶೈಲಾ ಆರ್.ಪ್ರಭು, ಹಿಟ್ಟಿನ ಗಿರಣಿ ರಾಘವೇಂದ್ರ, ಇನ್ನಿತರರು ಆರೋಪಿಸಿ ಮಂಗಳೂರು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮೂಲಕ ಸಂಬಂಧಪಟ್ಟ ಇಲಾಖೆಯ ಗುತ್ತಿಗೆದಾರ ಮತ್ತು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Leave a Comment

error: Content is protected !!