ಸಾಗರ : ಯುವಕನೊಬ್ಬ ಹೆದ್ದಾರಿಯಲ್ಲೇ ಲಾಂಗ್ ಹಿಡಿದು ಓಡಾಡಿ ಆತಂಕ ಹುಟ್ಟಿಸಿದ ಘಟನೆ ತಾಲೂಕಿನ ಆನಂದಪುರದಲ್ಲಿ ಭಾನುವಾರ ನಡೆದಿದೆ.
ಯುವಕನನ್ನು ಗಮನಿಸಿದ ಸ್ಥಳೀಯರು ಲಾಂಗ್ ಕಸಿದುಕೊಂಡು ಹಿಗ್ಗಾಮುಗ್ಗಾ ಥಳಿಸಿ ನಂತರ ಆನಂದಪುರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಾರು ಚಾಲಕರೊಬ್ಬರು ಯುವಕ ಲಾಂಗ್ ಹಿಡಿದು ಓಡಾಡಿದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.