ವಿದ್ಯುತ್ ಸ್ಪರ್ಶಿಸಿ ಎಮ್ಮೆ ಸಾವು !
ಸೊರಬ: ಕುಡಿಯುವ ನೀರಿನ ಸಂಪರ್ಕದ ಮೇನ್ಸ್ ವಯರ್ ತುಳಿದು ವಿದ್ಯುತ್ ಪ್ರವಹಿಸಿ (Current Shock) ಎಮ್ಮೆಯೊಂದು ಮೃತಪಟ್ಟ ಘಟನೆ ಸೊರಬ (Soraba) ತಾಲೂಕಿನ ಮಳಲಗದ್ದೆಯಲ್ಲಿ (Malalagadde) ಮಂಗಳವಾರ ನಡೆದಿದೆ.
ಮಳಲಗದ್ದೆ ಗ್ರಾಮದಲ್ಲಿನ ಕುಡಿಯುವ ನೀರಿನ ಡ್ರಂ ಸಂಪರ್ಕ ಕೊಟ್ಟಿರುವ ವಿದ್ಯುತ್ ವೈಯರ್ ನೆಲದ ಮೇಲೆ ಬಿದ್ದಿದೆ. ಮೇಯಲು ಹೋದ ಎಮ್ಮೆ ವೈಯರ್ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದೆ.
ಉಳವಿ ಗ್ರಾಪಂ ಅಧ್ಯಕ್ಷರು ಹಾಗೂ ಮಳಲಗದ್ದೆ ಸದಸ್ಯರಿಗೆ ಮತ್ತು ನೀರುಗಂಟಿಗೆ ವೈಯರ್ ಬಿದ್ದಿರುವ ಬಗ್ಗೆ ಹಲವರು ಬಾರಿ ಗಮನಕ್ಕೆ ತಂದರು ಸರಿಪಡಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಎಮ್ಮೆಯ ಸಾವಿಗೆ ಇವರೆ ಕಾರಣ ಎಂದು ಮೃತ ಎಮ್ಮೆಯ ಮಾಲಿಕ ಮಳಲಗದ್ದೆಯ ಜಗದೀಶ್ ಹೊಸಮನಿ ಆರೋಪಿಸಿದ್ದಾರೆ.