ಶಿವಮೊಗ್ಗ : ಆಕಾಶವಾಣಿ ಆರ್.ಜೆ. ಹಾಗೂ ಕನ್ನಡ ಉಪನ್ಯಾಸಕ, ಗಣೇಶ್ ಆರ್ ಕೆಂಚನಾಲ ಇವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ, “ಕನ್ನಡ ನಾಟಕಗಳಲ್ಲಿ ಶರಣರ ಪ್ರ್ರತಿನಿಧೀಕರಣದ ಭಿನ್ನ ಆಯಾಮಗಳು” ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿ ನೀಡಿ ಘೋಷಣೆ ಮಾಡಿದೆ.
ಸಾಣೆಹಳ್ಳಿಯ ಶಿವಸಂಚಾರ, ಚಿತ್ರದುರ್ಗದ ಜಮುರಾ, ಶಿವಮೊಗ್ಗ ಬೆಕ್ಕಿನಕಲ್ಮಠದ “ಅಲ್ಲಮರಂಗ”ದಡಿ ಪ್ರದರ್ಶನಗೊಂಡ ಶರಣರ ನಾಟಕಗಳು ಹಾಗೂ ಆಧುನಿಕ ಕವಿಗಳ ಕೆಲ ಶರಣರ ನಾಟಕಗಳನ್ನು ಸಂಶೋಧನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.