ಧರ್ಮ ಜಾಗೃತಿಗಾಗಿ ‘ಶ್ರೀಶೈಲ ಜಗದ್ಗುರುಗಳ ನಡಿಗೆ ಮಲೆನಾಡ ಕಡೆಗೆ’ ಉತ್ತಮ ಸ್ಪಂದನೆ

Written by Malnadtimes.in

Updated on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ: ವೀರಶೈವ ಪಂಚಪೀಠಗಳಲೊಂದಾಗಿರುವ ಶ್ರೀಶೈಲ ಸೂರ್ಯ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ.ಶ್ರೀಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪದರು ಮಲೆನಾಡಿನ ವ್ಯಾಪ್ತಿಯ ಧರ್ಮ ಜಾಗೃತಿಯೊಂದಿಗೆ ಗುರು-ವಿರಕ್ತ ಪರಂಪರೆ ಒಂದೇ ಸಮಾಜದ ಧಾರ್ಮಿಕ ಭಾವನೆಗೆ ಒಂದೇ ನಾಣ್ಯದ ಎರಡುಮುಖವಿದ್ದಂತೆ ಆ ನಿಟ್ಟಿನಲ್ಲಿ ಗುರು ವಿರಕ್ತರು ಎಂಬ ಬೇಧ-ಭಾವನೆ ಮಾಡದೇ ಸಮಾಜದ ಸಂಘಟನೆಯೊಂದಿಗೆ ಧರ್ಮದ ಬೋಧನೆಯನ್ನು ಸಾರುವ ಉದ್ದೇಶದಿಂದಾಗಿ  ಕಳೆದ ಎರಡು ಮೂರು ದಿನಗಳಿಂದ ಮಲೆನಾಡಿನ ವ್ಯಾಪ್ತಿಯಲ್ಲಿ “ಧರ್ಮಜಾಗೃತಿ ನಡಿಗೆ-ಮಲೆನಾಡ ಕಡೆಗೆ’’ ಈ ಮಹತ್ಕಾರ್ಯಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಶ್ರೀಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪದರು ಮೆಚ್ಚುಗೆ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆ, ಕೋಣಂದೂರು, ಹೊಸನಗರ, ಕೋಡೂರು ಹಾಲುಗುಡ್ಡೆ, ವಸವೆ, ಇಂದ್ರೋಡಿ, ಆದುವಳ್ಳಿ, ಆಲವಳ್ಳಿ,‌ ಗವಟೂರು, ಬೆಳಕೋಡು, ಜಳಬೈಲು, ಹುಳಗದ್ದೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಭಕ್ತರ ಮನೆಮನೆಗೆ ತೆರಳಿ “ಇಷ್ಟಲಿಂಗ ಮಹಾಪೂಜೆ ಮತ್ತು ಪಾದಪೂಜೆಯೊಂದಿಗೆ ಧರ್ಮಜಾಗೃತಿ’’ ಸಮಾರಂಭದ ದಿವ್ಯಸಾನಿದ್ಯವನ್ನು ವಹಿಸಿ ಆಶೀರ್ವಚನ ನೀಡಿ ಮಲೆನಾಡಿನಲ್ಲೂ ಮಳೆಯ ಕೊರತೆ ಎದುರಿಸುವಂತಾಗಿದ್ದು ಬಯಲು ಸೀಮೆಯಂತಾಗಿದೆ. ತಾವು ಮಲೆನಾಡಿನ ವ್ಯಾಪ್ತಿಗೆ ಬರುತ್ತಿದ್ದಂತೆ ಮಲ್ಲಯ್ಯನ ಪವಾಡವೆಂಬಂತೆ ನಾವು ಹೋದ ಕಡೆಯಲ್ಲಿ ಮಳೆಯ ಅಗಮನದಿಂದಾಗಿ ಭಕ್ತರು ಹರ್ಷಿತರಾಗಿದ್ದಾರೆಂದ ಅವರು ಶ್ರೀಶೈಲ ಮಲ್ಲಯ್ಯನಿಗೂ ಹಾಗೂ ಮಲೆನಾಡಿನ ಮಲ್ಲವರಿಗೂ ಭಕ್ತಿಭಾವದ ಅವಿನಾಭಾವ ಸಂಬಂಧವಿದೆ. ಆ ಕಾರಣ ಮಲೆನಾಡಿನಲ್ಲಿ ಮಲ್ಲಯ್ಯನ ಭಕ್ತರು ಹೆಚ್ಚು ಹೆಚ್ಚು ಇದ್ದು ಸದಾ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಾಶೀರ್ವಾದಕ್ಕೆ ಅಗಮಿಸುತ್ತಿರುವ ಭಕ್ತರಿಗಾಗಿ ಶ್ರೀಶೈಲದಲ್ಲಿ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಯಾತ್ರಿ ನಿವಾಸ ಮತ್ತು ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಗುತ್ತಿದ್ದು ಭಕ್ತರು ತಮ್ಮ ದುಡಿಮೆಯ ಅಲ್ಪ ಹಣವನ್ನು ಧಾರ್ಮಿಕ ಸೇವಾ ಕಾರ್ಯಕ್ಕೆ ನೀಡುವಂತಾಗಿ ಎಂದರು.

ಈ ಧರ್ಮಜಾಗೃತಿ ಧರ್ಮಸಭೆಯಲ್ಲಿ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ,ತೊಗರ್ಸಿ ಕ್ಯಾಸನೂರು ಹಿರೇಮಠದ ಘನ ಬಸವಲಿಂಗ ಶಿವಾಚಾರ್ಯರು, ನೇತೃತ್ವದಲ್ಲಿ ಮಲೆನಾಡಿನ ವ್ಯಾಪ್ತಿಯಲ್ಲಿ ಈ ಧರ್ಮ ಜಾಗೃತಿ ಕಾರ್ಯಕ್ರಮ ಜರುಗಿದೆ.

ಬಿಜಾಪುರ ಬಸವನಬಾಗೇವಾಡಿ ಮಠದ ರೇಣುಕ ಶಿವಾಚಾರ್ಯ ಸ್ವಾಮಿಜಿ ಹಾಲುಗುಡ್ಡೆಯ ಹೆಚ್.ಎಸ್.ರವಿ,ಪವಿತ್ರ ರವಿ, ಶ್ರೇಯಾ,ಪ್ರಸಾದ್, ಶ್ರೀಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಎಂ.ಆರ್.ಶಾಂತವೀರಪ್ಪಗೌಡ,ಕಾರ್ಯದರ್ಶಿಡಿ.ಎಸ್.ರಾಜಾಶಂಕರ್, ಹೆಚ್.ಎಂ.ವರ್ತೇಶಪ್ಪಗೌಡ, ಬಿ.ವಿ.ನಾಗಭೂಷಣ, ಬಿ.ಹೆಚ್.ಸ್ವಾಮಿಗೌಡ, ಡಿ.ಈ.ಮಧುಸೂದನ್,ನೆವಟೂರು ದೇವೇಂದ್ರಪ್ಪಗೌಡ,ನೆವಟೂರು ಈಶ್ವರಪ್ಪ (ಸ್ವಾಮಿಗೌಡ), ಬೆನವಳ್ಳಿ ಬಿ.ಎಲ್.ನಿಂಗಪ್ಪ, ಜಿ.ಡಿ.ಮಲ್ಲಿಕಾರ್ಜುನ ಗವಟೂರು, ದೂನ ಕುಮಾರಸ್ವಾಮಿ, ಹಾಲುಗುಡ್ಡೆ ಪುಟ್ಟಪ್ಪ, ಸಮಾಜದ ಇನ್ನಿತರರು ಹಾಜರಿದ್ದರು.

ಮುತ್ತೈದೆಯರು ಪೂರ್ಣಕುಂಭದೊಂದಿಗೆ ವಾದ್ಯದ ಮೆರವಣಿಗೆಯೊಂದಿಗೆ ಶ್ರೀಶೈಲ ಜಗದ್ಗುರುಗಳನ್ನು ನೂರಾರು ಭಕ್ತ ಸಮೂಹ ಪಾಲ್ಗೊಂಡು ಸ್ವಾಗತಿಸಿ ಶ್ರೀಗಳವರನ್ನು ಬರಮಾಡಿಕೊಂಡರು.

Read More

Leave a Comment

error: Content is protected !!