ಹಿಂದೂ ಸಂಗಮೋತ್ಸವಕ್ಕೆ ಮನೆಮನೆಗೆ ಆಹ್ವಾನ ಪತ್ರಿಕೆಯೊಂದಿಗೆ ಕರೆಯೋಲೆ

By malnad tech

Published on:

Spread the love

ರಿಪ್ಪನ್‌ಪೇಟೆ ; ಇಲ್ಲಿನ ಹಿಂದೂ ಸಂಗಮ ಆಯೋಜನಾ ಸಮಿತಿ ಹೊಸನಗರ ಇವರು ರಿಪ್ಪನ್‌ಪೇಟೆ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಫೆಬ್ರವರಿ 2 ರಂದು ಸೋಮವಾರ ಸಂಜೆ 4 ಗಂಟೆಗೆ `ಹಿಂದೂ ಸಂಗಮ’ ಆಯೋಜಿಸಲಾಗಿರುವ ಹಿಂದೂ ಸಂಗಮೋತ್ಸವಕ್ಕೆ ಕಾರ್ಯಕರ್ತರು ಮನೆಮನೆಗೆ ತೆರಳಿ ಆಹ್ವಾನ ಪತ್ರಿಕೆಯನ್ನು ನೀಡುವುದರೊಂದಿಗೆ ಕರೆಯೋಲೆ ನಡೆಸುತ್ತಿದ್ದಾರೆ.

ಅಂದು ಮಧ್ಯಾಹ್ನ ಗೋ ಪೂಜೆಯೊಂದಿಗೆ ಹೊಸನಗರ ರಸ್ತೆಯಲ್ಲಿರುವ ಜಿ.ಎಸ್.ಬಿ.ಕಲ್ಯಾಣ ಮಂದಿರದಿಂದ ಶೋಭಾಯಾತ್ರೆ ಆರಂಭಗೊಂಡು ವಿನಾಯಕ ವೃತ್ತದ ಮೂಲಕ ಶಿವಮೊಗ್ಗ ರಸ್ತೆಯಲ್ಲಿರುವ ಭೂಪಾಳಂ ಚಂದ್ರಶೇಖರಯ್ಯ ಸಭಾಭವನ ತಲುಪುವುದು. ಈ ಶೋಭಾಯಾತ್ರೆಯಲ್ಲಿ ಸಕಲ ಹಿಂದೂ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಯಾಗುವಂತೆ ಹಿಂದೂ ಸಂಗಮ ಆಯೋಜನ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Leave a comment