ಚಿಕ್ಕಮಗಳೂರು ; ಜಿಲ್ಲೆಯ ಶ್ರೀರಾಮ ಸೇನೆಯ ನೂತನ ಜಿಲ್ಲಾ ವಕ್ತಾರರಾಗಿ ಪ್ರೀತಮ್ ಹೆಬ್ಬಾರ್ ಅವರನ್ನು ನೇಮಕ ಮಾಡಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಅವರು ಆದೇಶ ಹೊರಡಿಸಿದ್ದಾರೆ.
ಪ್ರೀತಮ್ ಹೆಬ್ಬಾರ್ ಅವರಿಗೆ ಹೆಚ್ಚುವರಿಯಾಗಿ ಶ್ರೀರಾಮ ಸೇನಾ ಕಳಸ ತಾಲೂಕು ಅಧ್ಯಕ್ಷರ ಜವಾಬ್ದಾರಿಯನ್ನು ನೀಡಲಾಗಿದೆ.
ಇತ್ತೀಚೆಗೆ ಚಿಕ್ಕಮಗಳೂರಿಗೆ ಆಗಮಿಸಿದ್ದ ಪ್ರಮೋದ್ ಮುತಾಲಿಕ್ ಪ್ರೀತಮ್ ಹೆಬ್ಬಾರ್ ಅವರಿಗೆ ಜವಾಬ್ದಾರಿ ಘೋಷಣೆ ಮಾಡಿ ನೇಮಕಾತಿ ಪತ್ರ ವಿತರಿಸಿದ್ದಾರೆ.
ಪ್ರೀತಮ್ ಹೆಬ್ಬಾರ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಿಡ್ಲಾರ್ಮಕ್ಕಿ ವಾಸಿಯಾಗಿದ್ದು ಹಲವು ವರ್ಷಗಳಿಂದ ಹಿಂದೂಪರ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಜೊತೆಗೆ ಪ್ರಸ್ತುತ ಕಳಸ ತಾಲೂಕು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.







