ಶಿವಮೊಗ್ಗದ ಗಾಂಧಿ ಬಜಾರ್‌ನ ತಿಮ್ಮಪ್ಪನ ಕೊಪ್ಪಲು ಗ್ರಾಮದ ನಿವಾಸಿಯಾಗಿರುವ 22 ವರ್ಷದ ಮಾನ್ಯ ಎಂಬ ಯುವತಿ, ಕಳೆದ ಕೆಲವು ದಿನಗಳಿಂದ ಡೆಂಘೀ ಜ್ವರದಿಂದ ಗಂಭೀರವಾಗಿ ಅಸ್ವಸ್ಥರಾಗಿದ್ದರು. ಮೊದಲಿನಿಂದಲೇ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಯುವತಿಯ ಆರೋಗ್ಯದಲ್ಲಿ ಮತ್ತಷ್ಟು ತೀವ್ರ ಕುಸಿತ ಕಂಡುಬಂದ ಹಿನ್ನೆಲೆ ವೈದ್ಯರ ಸಲಹೆಯಂತೆ ತಕ್ಷಣ ಹೆಚ್ಚಿನ ಸೌಲಭ್ಯವಿರುವ ಆಸ್ಪತ್ರೆಗೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.
ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಮನಗಂಡು, ಯುವತಿಯನ್ನು ವಿಮಾನದ ಮೂಲಕ ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ಏರ್‌ಲಿಫ್ಟ್ ಮೂಲಕ ರವಾನಿಸಲಾಯಿತು. ಇದಕ್ಕಾಗಿ ನಗರ ಪೊಲೀಸ್ ಇಲಾಖೆಯು ಅತ್ಯಂತ ಪರಿಣಾಮಕಾರಿ ಕ್ರಮ ಕೈಗೊಂಡು, ಆಸ್ಪತ್ರೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣದವರೆಗೆ ಯುವತಿಯ ಚಿಕಿತ್ಸೆ ವಿಳಂಬವಾಗದಂತೆ ‘ಝೀರೋ ಟ್ರಾಫಿಕ್’ ವ್ಯವಸ್ಥೆ ಒದಗಿಸಿತು. ವಿಮಾನ ಸೇವೆಯ ವ್ಯವಸ್ಥೆ ಕೂಡಾ ಕೂಡಲೇ ಮಾಡಲ್ಪಟ್ಟಿತ್ತು. ಇವರ ಕುಟುಂಬಸ್ಥರು ಹಾಗೂ ವೈದ್ಯರು ವಿಮಾನದಲ್ಲಿ ಅವರೊಂದಿಗೆ ಇದ್ದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಇಲಾಖೆ ತೋರಿದ ಸ್ಪಂದನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.