training on bakery products ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಜುಲೈ 14 ರಿಂದ ಆಗಸ್ಟ್ 12 ರವರೆಗೆ 1 ತಿಂಗಳ ಅವಧಿಯ ಬೇಕರಿ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ತರಬೇತಿ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಬೇಕರಿ ಘಟಕದಲ್ಲಿ ನಡೆಯಲಿದೆ.
ತರಬೇತಿಯಲ್ಲಿ ಭಾಗವಹಿಸುವ ಆಸಕ್ತರಿಗೆ ಕೆಳಗಿನ ಬೇಕರಿ ಉತ್ಪನ್ನಗಳ ತಯಾರಿಕೆ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ನೀಡಲಾಗುತ್ತದೆ:
- ಬೆಣ್ಣೆ ಬಿಸ್ಕತ್ತು
- ಕೋಕೊನಟ್ ಕುಕೀಸ್
- ಮಸಾಲ ಬಿಸ್ಕತ್ತು
- ಫ್ರೂಟ್ ಕೇಕ್
- ಸ್ಪಾಂಜ್ ಕೇಕ್
- ಜೆಲ್ ಕೇಕ್
- ಬಟರ್ ಐಸಿಂಗ್
- ಮಿಲ್ಕ್ ಬ್ರೆಡ್
- ಪಫ್ ಪೇಸ್ಟ್ರಿ
- ದಿಲ್ ಪಸಂದ್
- ಬಾಂಬೆ ಕಾರ
- ಇತರ ವಿವಿಧ ತಿನಿಸುಗಳು
- ಶುಲ್ಕ: ರೂ. 4500/-
- ನೋಂದಣಿ ಅಂತಿಮ ದಿನ: ಜುಲೈ 12
ಆಸಕ್ತರು ದೂರವಾಣಿ ಮೂಲಕ ಅಥವಾ ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 ಡಾ. ಜಯಶ್ರೀ ಎಸ್. – 9449187763
📞 ಜಯಶಂಕರ – 9686555897
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.