ಮಳೆಗಾಲದಲ್ಲಿ ನಿಂಬೆ ಮತ್ತು ಕಲ್ಲು ಉಪ್ಪಿನ ಆರೋಗ್ಯ ಲಾಭಗಳು – ನಿಮ್ಮ ದೇಹವನ್ನು ಹೈಡ್ರೇಟ್ ಮಾಡಿ!

ನಿಂಬೆ ಮತ್ತು ಕಲ್ಲುಪ್ಪಿನ ಪ್ರಯೋಜನಗಳು: ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆಯಾಗುವ ಸಮಸ್ಯೆ ಕಾಡುವುದು ಸರ್ವೆ  ಸಾಮಾನ್ಯ, ಇದನ್ನು ಸಾಮಾನ್ಯವಾಗಿ ಎಲ್ಲರೂ ಕೂಡ  ನಿರ್ಲಕ್ಷಿಸುತ್ತಾರೆ. ನಿಂಬೆ ಮತ್ತು ಕಲ್ಲುಪ್ಪಿನ ಪ್ರಯೋಜನಗಳು ಕೆಲವೊಂದು ಆರೋಗ್ಯ  ಸಮಸ್ಯೆಗಳನ್ನು ತೊಡೆದುಹಾಕಲು ಪ್ರಯೋಜನಕಾರಿ

Let’s get started!

ಆರೋಗ್ಯದ ಎಚ್ಚರಿಕೆ ಬೇಕು! ಮಳೆಯ ತಂಪು ಚುಮುಚುಮುವು ಒಳ್ಳೆಯದಾದರೂ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತವೆ. ನೀರಿನ ಕೊರತೆ, ಆಲಸ್ಯ, ಮಲಬದ್ಧತೆ ಸಾಮಾನ್ಯ.

ನಿಂಬೆ + ಕಲ್ಲು ಉಪ್ಪು = ಆರೋಗ್ಯದ ರಕ್ಷಣೆ

ಈ ಸರಳ ಮಿಶ್ರಣ ನಿಮ್ಮ ದೇಹವನ್ನು ಉತ್ತಮವಾಗಿ ಹೈಡ್ರೇಟ್ ಮಾಡುತ್ತದೆ. ವಿಟಮಿನ್ C + ಎಲೆಕ್ಟ್ರೋಲೈಟ್‌ಗಳ ಶಕ್ತಿ!

ಬಾಯಾರಿಕೆ ಕಡಿಮೆ? ಇದು ಸಣ್ಣ ಸಮಸ್ಯೆ ಅಲ್ಲ!

ಮಳೆಗಾಲದಲ್ಲಿ ಶೀತ ಮತ್ತು ತೇವಾಂಶದಿಂದ ಬಾಯಾರಿಕೆಯ ಭಾವನೆ ಕಡಿಮೆಯಾಗುತ್ತದೆ. ಆದರೆ ದೇಹದಿಂದ ನೀರು ಹೊರಬರುತ್ತಲೇ ಇರುತ್ತದೆ.

ತಜ್ಞರ ಎಚ್ಚರಿಕೆ ಏನು?

ಪೌಷ್ಟಿಕತಜ್ಞೆ ಪೂಜಾ ಮಖಿಜಾ ಹೇಳುವಂತೆ – "ಬಾಯಾರಿಕೆ ಇಲ್ಲ ಎನ್ನುವುದು ದೇಹಕ್ಕೆ ನೀರಿನ ಅಗತ್ಯವಿಲ್ಲ ಎಂದರ್ಥವಲ್ಲ!"

ನಿಂಬೆಹಣ್ಣಿನ ಲಾಭಗಳು

ನಿಂಬೆ ವಿಟಮಿನ್ C ಒದಗಿಸುತ್ತದೆ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆ ಸಹಾಯ ಮಾಡುತ್ತದೆ.

ಕಲ್ಲು ಉಪ್ಪಿನ ಶಕ್ತಿ

ಕಲ್ಲು ಉಪ್ಪು ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟ್‌ಗಳನ್ನು ಪೂರೈಸುತ್ತದೆ. ಇದು ಆಯಾಸ ಮತ್ತು ಆಲಸ್ಯವನ್ನು ತಡೆಯಲು ಸಹಾಯಕ.

ನೀರನ್ನು ಎಷ್ಟು ಕುಡಿಯುತ್ತೇವೆಯೋ ಅಷ್ಟು ನಾವು ಆರೋಗ್ಯಕರವಾಗಿ ಎಲ್ಲಾ ಕೆಲಸಗಳನ್ನು ಲವಲವಿಕೆಯಿಂದ ಮಾಡಲು ಸಾಧ್ಯವಾಗುತ್ತದೆ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ನಮ್ಮ ಕೈಯಲ್ಲಿದೆ.