ಕುವೆಂಪು ಮನೆಗೆ ಹೊರಟವರಿಗೆ ಸ್ನೇಹಿತ ಚಂಪಕ ಸರಸು ನೋಡಿಕೊಂಡು ಬನ್ನಿ ಎಂದಿದ್ದೇ ತಪ್ಪಾಯ್ತ ?

Written by Malnadtimes.in

Published on:

WhatsApp Group Join Now
Telegram Group Join Now

SAGARA | ಸ್ನೇಹಿತರ ಜೊತೆ ಪಿಕ್ ನಿಕ್ ಗೆಂದು ಬಂದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮಹಂತಿನ ಮಠದ ಚಂಪಕ ಸರಸುವಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತ ಯುವಕನನ್ನು ಬೆಂಗಳೂರು ಮೂಲದ ಇಂಜಿನಿಯರ್ ಕುಶಾಲ್ (22) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕುಶಾಲ್‌ ತನ್ನಿಬ್ಬರು ಸ್ನೇಹಿತರೊಡನೆ ಪ್ರವಾಸಕ್ಕೆಂದು ಕಾರಿನಲ್ಲಿ ಆಗಮಿಸಿದ್ದ. ಕುಶಾಲ್, ಸಾಯಿರಾಂ ಹಾಗೂ ಯಶವಂತ್ ಈ ಮೂವರು ಇತಿಹಾಸ ಹೊಂದಿರುವ ಮಹಂತಿನ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಶಾಲ್‌ ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದಾನೆ. ಆದರೆ ಉಸಿರುಗಟ್ಟಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಬೆಂಗಳೂರಿನಿಂದ ಬಂದ ಯುವಕರು ತೀರ್ಥಹಳ್ಳಿಯ ಕುಪ್ಪಳಿಯ ಕುವೆಂಪುರವರ ಮನೆಗೆ ತೆರಳುವ ಉದ್ದೇಶದಿಂದ ಟ್ರಿಪ್ ಪ್ಲಾನ್ ಮಾಡಿ ಬಂದಿದ್ದರು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಕುಶಾಲ್ ರವರ ಸ್ನೇಹಿತ ಆನಂದಪುರ ಸಮೀಪ ಚಂಪಕ ಸರಸು ಎಂಬ ಉತ್ತಮ ಸ್ಥಳವಿದೆ ನೋಡಿಕೊಂಡು ಬನ್ನಿ ಎಂದು ತಿಳಿಸಿದ್ದರಿಂದ ಕುಶಾಲ್ ಮತ್ತು ಗೆಳೆಯರು ಚಂಪಕ ಸರಸುವಿಗೆ ಬಂದಿದ್ದರು ಎನ್ನಲಾಗಿದೆ.

ಚಂಪಕ ಸರಸುವಿನಲ್ಲಿ ಕೆಲ ಸ್ಥಳೀಯ ಯುವಕರು ಈಜಾಡುತ್ತಿದ್ದನ್ನು ಕಂಡು ಕುಶಾಲ್ ಕೂಡ ಬಟ್ಟೆ ತೆಗೆದು ಈಜಾಡಲು ಪ್ರಾರಂಭಿಸಿದ್ದಾನೆ, ಆತನ ಸ್ನೇಹಿತನ ಹೇಳಿಕೆಯ ಪ್ರಕಾರ ಕುಶಾಲ್ ಗೆ ಈಜು ಕೂಡ ಬರುತ್ತಿತ್ತು ಆದರೆ ದುರಾದೃಷ್ಟಾವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಹಲವಾರು ವರ್ಷಗಳ ಕಾಲ ಪಾಳು ಬಿದ್ದಿದ್ದ ಚಂಪಕ ಸರಸು ಕಲ್ಯಾಣಿಯನ್ನು ನಟ ಯಶ್ ಅವರ ಯಶೋಮಾರ್ಗ ಸಂಸ್ಥೆ ಕಳೆದೆರೆಡು ವರ್ಷಗಳ ಹಿಂದೆಯಷ್ಟೇ ಸ್ವಚ್ಚಗೊಳಿಸಿದ್ದರು.

Leave a Comment

error: Content is protected !!