SORABA | ಗಾಂಜಾ ಮಾರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೊರಬ ತಾಲೂಕಿನ ಆನವಟ್ಟಿಯ ತಿಮ್ಮಾಪುರ ಗುಡ್ಡದ ತಿರುವು ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ಹಾವೇರಿ ಜಿಲ್ಲೆಯ ಮಲ್ಲಾಪುರ ಗ್ರಾಮದ ಸೊಹೇಲ್ ಮುಲ್ಲನ್ನವರ್ ಹಾಗೂ ತಿಳವಳ್ಳಿ ಗೌಸ್ ಮಹಮದ್ ಎಂಬುವವರನ್ನು ಬಂಧಿಸಿ 900 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಗಾಂಜಾದ ಬೆಲೆ ಸುಮಾರು 40 ಸಾವಿರ ರೂ.ಗಳು ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಶಿಕಾರಿಪುರ ಡಿವೈಎಸ್ಪಿ ಶೇಖರ್ ಮಾರ್ಗದರ್ಶನದಲ್ಲಿ ಸೊರಬ ಸಿಪಿಐ ರಮೇಶ್ ಹಾಗೂ ಆನವಟ್ಟಿ ಪಿಎಸ್ಐ ರಾಜುರೆಡ್ಡಿ, ಸಿಬ್ಬಂದಿ ಗಿರೀಶ್, ಜಗದೀಶ್, ಮಂಜುನಾಥ, ಹರಿಪ್ರಸಾದ್, ಚಿಕ್ಕಪ್ಪ, ಪ್ರಕಾಶ, ಹನುಮಂತ, ವಾಹನ ಚಾಲಕ ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.