ಗ್ರಾಮ ಭೂಮಿಗಳು ಸಂರಕ್ಷಣೆಯಾಗಲಿ ; ಅನಂತಹೆಗಡೆ ಅಶಿಸರ

Written by Malnadtimes.in

Published on:

WhatsApp Group Join Now
Telegram Group Join Now

SORABA | ಗ್ರಾಮ ನಿರ್ಣಯದ ಮೂಲಕ ಗ್ರಾಮದ ಸಾರ್ವಜನಿಕ ಭೂಮಿಯನ್ನು ಉಳಿಸಿಕೊಳ್ಳಲು ಅವಕಾಶವಿದೆ. ಗ್ರಾಮ ನಿರ್ಣಯವನ್ನು ಗ್ರಾಪಂ ಜೀವವೈವಿಧ್ಯ ಸಮಿತಿ ಅಂಗೀಕರಿಸಿ ರಕ್ಷಣೆಗೆ ಸಹಕರಿಸಬಹುದು ಎಂದು ಅನಂತಹೆಗಡೆ ಅಶಿಸರ ಹೇಳಿದರು.

ಚಂದ್ರಗುತ್ತಿ ಗ್ರಾಮದ ಗ್ರಾಪಂ ಕಛೇರಿಯಲ್ಲಿ ಅರಣ್ಯಭೂಮಿ, ಬೆಟ್ಟ, ಗೋಮಾಳ ರಕ್ಷಣೆ ಕುರಿತಂತೆ ಆಸಕ್ತಿ ತೋರಿರುವ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದರು.

ಈ ಹಿಂದೆ ಬಸ್ತಿಕೊಪ್ಪದಲ್ಲಿ ಗಣಿಹಾನಿ ಕುರಿತು ಗ್ರಾಮಸ್ಥರು ಸಾಮೂಹಿಕ ಪ್ರತಿಭಟನೆ ನಡೆಸಿದ ಪರಿಣಾಮ ಗಣಿಯಿಂದಾಗುವ ಹಾನಿ ನಿಯಂತ್ರಣಕ್ಕೆ ಬಂದಿದೆ. ಆ ವೇಳೆ ತಾಲ್ಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ, ಗ್ರಾಮ ಪಂಚಾಯತದ ಜೀವವೈವಿಧ್ಯ ಸಮಿತಿ ಗ್ರಾಮಾಭಿವೃದ್ಧಿ ಶಿಬಿರ ನಡೆಸಿ ಕೊರತೆ ನೀಗಿಸಲು ಮುಂದಾಗಿದೆಯಾದರೂ ಇಂದಿಗೂ ಸಮರ್ಪಕ ಸಂಪರ್ಕ ರಸ್ತೆಯ ಕೊರತೆಯಿದೆ. ಸ್ಥಳೀಯ ಆಡಳಿತ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.

ಹೊಳೆಮರೂರು ಗ್ರಾಮಸ್ಥರು ಅಪಾರ ಪ್ರಮಾಣದ ಅರಣ್ಯ ನಾಶ ತಡೆಗಟ್ಟಿ ಮಾದರಿಯಾಗಿದ್ದಾರೆ. ಈಚೆಗೆ ತೋರಣಗೊಂಡನಕೊಪ್ಪ ಗ್ರಾಮಸ್ಥರೂ ಸಹ ತಮ್ಮ ಗ್ರಾಮದ ಸಾಮೂಹಿಕ ಭೂಮಿ, ಅರಣ್ಯ ಉಳಿಸಿಕೊಂಡಿರುವುದು ಪ್ರಶಂಸನೀಯ ಸಂಗತಿ ಎಂದು ಶ್ಲಾಘಿಸಿದರು.

ಬಿಎಂಸಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಗ್ರಾಮ ಸಹಕಾರವಿದ್ದರೆ ಆ ಗ್ರಾಮಗಳ ಸಾರ್ವಜನಿಕ ಭೂಮಿಗಳ ಉಳುವಿಗೆ ಜೀವವೈವಿಧ್ಯ ಸಮಿತಿ, ಮಂಡಳಿಯ ಸಹಕಾರವಿದೆ. ಭವಿಷ್ಯದ ಹಾಗೂ ಪ್ರಸ್ತುತದ ಪ್ರಕೃತಿ ವೈಪರೀತ್ಯದ ನಿಯಂತ್ರಣಕ್ಕೆ ಗ್ರಾಮ ಮಟ್ಟದ ಜಾಗೃತಿ ಆಗಬೇಕಿದೆ ಎಂದರು.

ಇದೇ 23 ರಂದು ಶಿರಸಿಯಲ್ಲಿ ನಡೆಯುವ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ರಾಜ್ಯಸಮ್ಮೇಳನಕ್ಕೆ ಆಹ್ವಾನಿಸಿದರು.
ಸಮಾವೇಶದ ಕಾರ್ಯಸೂಚಿ ಬಗ್ಗೆ, ಆ ವೇಳೆ ಅಶಿಸರ ಅವರಿಗೆ ಅಭಿನಂದನೆ ಸಲ್ಲಿಸಿ ವೃಕ್ಷಮಿತ್ರ ಅಭಿನಂದನ ಗ್ರಂಥ ಲೋಕಾರ್ಪಣೆಗೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಂಡರು.

ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ,
ಪಿಡಿಒ ನಾರಾಯಣ ಮೂರ್ತಿ, ಗ್ರಾ.ಪಂ ಸದಸ್ಯ ಲಕ್ಷ್ಮಿ ಚಂದ್ರಪ್ಪ, ತೋರಣಗೊಂಡನಕೊಪ್ಪ ಗ್ರಾಮದ ದಿನೇಶ್, ವಿಷ್ಣು, ಹೊಳೆಮರೂರು ಗ್ರಾಮದ ಗಂಗಾಧರ ಗೌಡರು, ಚಂದ್ರಗುತ್ತಿ ಗ್ರಾಮದ ವಿನಾಯಕ ಶೇಟ್, ಗ್ರಾಪಂ ನೌಕರರಾದ ಸಂತೋಷ್, ಮಂಜುನಾಥ್, ಉಪಸ್ಥಿತರಿದ್ದರು,

Leave a Comment

error: Content is protected !!