SAGARA | ತಾಲೂಕಿಮ ಆನಂದಪುರ ಶ್ರೀ ಮುರುಘಾಮಠದಲ್ಲಿರುವ DNSK ಆಯುರ್ವೇದ ಆಸ್ಪತ್ರೆ (ಡಾ. ನಾಗೇಶ್ ಸುವರ್ಣ ಕವಿ ಆಯುರ್ವೇದ ಆಸ್ಪತ್ರೆ) ಯಲ್ಲಿ ಮಹರ್ಷಿ ಆಯುರ್ವೇದ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಜು. 08 ಸೋಮವಾರದಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರ ಏರ್ಪಡಿಸಲಾಗಿದೆ.
ಈ ಶಿಬಿರದಲ್ಲಿ ವಿಶೇಷವಾಗಿ…..
- ಮೊಣಕಾಲು ಮಂಡಿ ನೋವು, Osteo Arthritis
- ಸೊಂಟ ನೋವು – ಸಯಾಟಿಕ, ಡಿಸ್ಕ್ ಬಲ್ಜ್ – Sciatca, Disc bulge
- ಭುಜ ನೋವು – ಫ್ರೋಜನ್ ಶೋಲ್ಡರ್, Frozen Shoulder
- ಪಾದ ಹಿಮ್ಮಡಿ ನೋವು – ಪ್ಲಾಂಟಾರ್ ಫಾಸೈಟಿಸ್ Plantar Fascitis
- ಅರ್ಧ ತಲೆನೋವು – ಮೈಗ್ರೇನ್, Maigrain headache
- ಪೈಲ್ಸ್, ಫಿಶರ್, ಫಿಸ್ಟುಲ, Piles (hemorrhoids), Fissure, Fistula in ano
- ಬಿ.ಪಿ. – ಹೈಪರ್ಟೆನ್ಶನ್ B. P.
- ಮಧುಮೇಹ – ಡಯಬಿಟಿಸ್ – ಸಕ್ಕರೆ ಕಾಯಿಲೆ Diabetes
- ಕಿಡ್ನಿಯ ಕಲ್ಲು, ಮೂತ್ರಾಶ್ಮರಿ, Kidneystone / Urolithiasis
ಇತ್ಯಾದಿ ಅನಾರೋಗ್ಯ ಸಮಸ್ಯೆಗಳಿಗೆ ಉಚಿತ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಮಹರ್ಷಿ ಆಯುರ್ವೇದ ಪ್ರೈವೇಟ್ ಲಿಮಿಟೆಡ್ ಇವರ ಪ್ರಾಯೋಜಕತ್ವದಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವೈ.ಬಿ. ಪ್ರಭುದೇವ ರವರು ಕೋರಿದ್ದಾರೆ.
ಹೆಸರು ನೋಂದಾಯಿಸಲು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 7204380230, 9448216180