ತೀರ್ಥಹಳ್ಳಿ : ಸಾಲ (Loan) ಬಾಧೆ ತಾಳಲಾರದೆ ರೈತನೋರ್ವ (Farmer) ಆತ್ಮಹತ್ಯೆಗೆ (Suicide) ಶರಣಾದ ಘಟನೆ ತಾಲೂಕಿನ ಹೊಸಹಳ್ಳಿ (Hosahalli) ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಅತ್ತಿಗಾರಬೈಲು ಗ್ರಾಮದ ಉಮೇಶ್ (55) ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ ತೀವ್ರವಾಗಿ ಬಾಧಿಸಿದ್ದು ಇದರಿಂದ ಬೇಸತ್ತು ಹೋಗಿದ್ದು ಕೈಮರ ಸೊಸೈಟಿ ಹಾಗೂ ವಿವಿಧೆಡೆ ಸಾಲ ಕೂಡ ಮಾಡಿಕೊಂಡಿದ್ದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಕಳೆದ ಆರು ತಿಂಗಳ ಹಿಂದೆ ಸಹ ಇದೆ ಗ್ರಾಮದ ರೈತನೋರ್ವ ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದನು.