SSLC Result | ಶೇ.73.40 ಫಲಿತಾಂಶ, ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ

Written by Malnadtimes.in

Published on:

WhatsApp Group Join Now
Telegram Group Join Now

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ (SSLC RESULT) ಫಲಿತಾಂಶ ಪ್ರಕಟಗೊಂಡಿದ್ದು, 73.40 % ಫಲಿತಾಂಶ ಬಂದಿದೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಇವರ ಜೊತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಉಪಸ್ಥಿತರಿದ್ದರು.

ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಪೈಕಿ ಬಾಲಕರು – 2,87,416 (65.90%) ಹಾಗೂ ಬಾಲಕಿಯರು – 3,43,788 (81.11%) ಉತ್ತೀರ್ಣರಾಗಿದ್ದಾರೆ.

ಜಿಲ್ಲಾವಾರು ಶೇಕಡಾವಾರು ವಿವರ

  • ಉಡುಪಿ – 94%
  • ದಕ್ಷಿಣ ಕನ್ನಡ- 92.12%
  • ಶಿವಮೊಗ್ಗ-88.67%
  • ಕೊಡಗು-88.67%
  • ಉತ್ತರ ಕನ್ನಡ- 86.54%
  • ಹಾಸನ- 86.28%
  • ಮೈಸೂರು-85.5%
  • ಶಿರಸಿ-84.64%
  • ಬೆಂಗಳೂರು ಗ್ರಾಮೀಣ-83.67%
  • ಚಿಕ್ಕಮಗಳೂರು-83.39%
  • ವಿಜಯಪುರ-79.82%
  • ಬೆಂಗಳೂರು ದಕ್ಷಿಣ-79%
  • ಬಾಗಲಕೋಟೆ-77.92%
  • ಬೆಂಗಳೂರು ಉತ್ತರ-77.09%
  • ಹಾವೇರಿ- 75.85%
  • ತುಮಕೂರು-75.16%
  • ಗದಗ-74.76%
  • ಚಿಕ್ಕಬಳ್ಳಾಪುರ- 73.61%
  • ಮಂಡ್ಯ-73.59%
  • ಕೋಲಾರ-73.57%
  • ಚಿತ್ರದುರ್ಗ-72.85%
  • ಧಾರವಾಡ-72.67%
  • ದಾವಣಗೆರೆ-72.49%
  • ಚಾಮರಾಜನಗರ-71.59%
  • ಚಿಕ್ಕೋಡಿ-69.82%
  • ರಾಮನಗರ-69.53%
  • ವಿಜಯನಗರ-65.61%
  • ಬಳ್ಳಾರಿ-64.99%
  • ಬೆಳಗಾವಿ-64.93%
  • ಮಧುಗಿರಿ-62.44%
  • ರಾಯಚೂರು-61.2%
  • ಕೊಪ್ಪಳ-61.16%
  • ಬೀದರ್-57.52%
  • ಕಲಬುರಗಿ-53.04%
  • ಯಾದಗಿರಿ-50.59%

ಶಿವಮೊಗ್ಗಕ್ಕೆ ದಾಖಲೆ ಫಲಿತಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 23,028 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 20,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಿಂದ ಜಿಲ್ಲೆಗೆ ಶೇ.88.67ರಷ್ಟು ಫಲಿತಾಂಶ ದೊರೆತಿದ್ದು, ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದೆ. ಕಳೆದ ಬಾರಿ ಶಿವಮೊಗ್ಗ ಜಿಲ್ಲೆ 28ನೇ ಸ್ಥಾನದಲ್ಲಿತ್ತು.

Leave a Comment

error: Content is protected !!