Karnataka Rain | ಮಳೆ ಮುಂದುವರಿಕೆ, ಈ ಜಿಲ್ಲೆಗಳಲ್ಲಿಂದು ಯೆಲ್ಲೋ ಅಲರ್ಟ್ ಘೋಷಣೆ

Written by Malnadtimes.in

Published on:

WhatsApp Group Join Now
Telegram Group Join Now

ಬೆಂಗಳೂರು : ಇನ್ನೊಂದು ವಾರ ರಾಜ್ಯದಲ್ಲಿ ಮಳೆ (Rain) ಮುಂದುವರೆಯಲಿದ್ದು ಬೆಂಗಳೂರು (Bangalore), ಹಾಸನ (Hasana), ಕೊಡಗು (Kodagu) ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಚಾಮರಾಜನಗರ (Chamarajanagara), ಚಿಕ್ಕಮಗಳೂರು (Chikkamagaluru), ಹಾಸನ (Hasana), ಕೊಡಗು (Kodagu), ಮಂಡ್ಯ (Mandya), ಮೈಸೂರು (Mysore) ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೊಷಿಸಲಾಗಿದೆ.

ಇನ್ನು ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಗುರುವಾರ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮಂಗಳೂರಿನಲ್ಲಿ ಸಿಡಿಲಬ್ಬರದ ಮಳೆಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಇತ್ತ ಬಂಗಾಳ ಕೊಲ್ಲಿಯಲ್ಲಿ ಈ ವರ್ಷದ ಮುಂಗಾರು ಪೂರ್ವ ಅವಧಿಯ ಮೊದಲ ಚಂಡಮಾರುತ ರೂಪುಗೊಳ್ಳುತ್ತಿದ್ದು, ಇದೇ ಭಾನುವಾರ ಪಶ್ಚಿಮ ಬಂಗಾಳ ಹಾಗೂ ಪಕ್ಕದ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ.

ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಗಲಿದೆ. ಎಂಎಂ ಹಿಲ್ಸ್, ಬಂಡೀಪುರ, ಸಿದ್ದಾಪುರ, ಬೇಗೂರು, ಚಾಮರಾಜನಗರ, ಮೂರ್ನಾಡು, ಎಚ್‌ಡಿ ಕೋಟೆ, ಪುತ್ತೂರು, ಸುಳ್ಯ, ಕೃಷ್ಣರಾಜಪೇಟೆ, ಮೈಸೂರು, ಕುಶಾಲನಗರ, ಹುಣಸೂರು, ಹಾರಂಗಿ, ಮಂಗಳೂರು, ಸೋಮವಾರಪೇಟೆ, ಕನಕಪುರ, ಭಾಗಮಂಡಲ, ಬಾಳೆಹೊನ್ನೂರಿನಲ್ಲಿ ಗುರುವಾರ ಮಳೆಯಾಗಿದೆ.

Leave a Comment

error: Content is protected !!