ಗವಟೂರು ದೇವಸ್ಥಾನದ 17ನೇ ವರ್ಷದ ವಾರ್ಷಿಕೋತ್ಸವ ; ಶ್ರೀರಾಮೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ರುದ್ರಹೋಮ ಧಾರ್ಮಿಕ ಕಾರ್ಯಕ್ರಮ

By malnad tech

Published on:

Spread the love

ರಿಪ್ಪನ್‌ಪೇಟೆ ; ಗವಟೂರು ಶ್ರೀರಾಮೇಶ್ವರ ದೇವಸ್ಥಾನ ಸೇವಾ ಸಮಿತಿ 17ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶ್ರೀರಾಮೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ರುದ್ರ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮವು ಸಂಭ್ರಮ ಸಡಗರದೊಂದಿಗೆ ಇಂದು ಸಂಪನ್ನಗೊಂಡಿತು.

ಮಾ. 17 ರಂದು ಮಂಗಳವಾರ ಬೆಳಗ್ಗೆ 7 ಗಂಟೆಗೆ ಆಶ್ಲೇಷ ಬಲಿ ಪೂಜೆ, 18 ರಂದು ಬೆಳಗ್ಗೆ 7 ಗಂಟೆಗೆ ಶ್ರೀರಾಮೇಶ್ವರ ದೇವರ ಪ್ರತಿಷ್ಟಾಪನಾ 17ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಲಹಳ್ಳಿ ಸಂತೋಷ ಭಟ್ಟರ ನೇತೃತ್ವದ ಪುರೋಹಿತ ಬಳಗದವರಿಂದ ಶ್ರೀರಾಮೇಶ್ವರ ದೇವರಿಗೆ ಶ್ರೀರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ, ರುದ್ರಹೋಮ, ಪಂಚಾಮೃತ ಅಭಿಷೇಕ ಪರಿವಾರ ದೇವರುಗಳಿಗೆ ಪೂಜೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.

ರಾತ್ರಿ 8 ಗಂಟೆಗೆ ನೀಲವರದ ಶ್ರೀಮಹಿಷ ಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ನೀಲಾವರ ಕ್ಷೇತ್ರ ಮಹಾತ್ಮೆ’’ ಪೌರಾಣಿಕ ಯಕ್ಷಗಾನ ಪ್ರದರ್ಶನ ಜನಾರ್ಕಷಣೆಗೊಂಡಿತು.

Leave a comment